ಖ್ಯಾತ ಕಾದಂಬರಿಕಾರ ತ.ರಾ.ಸು (ತ.ರಾ. ಸುಬ್ಬರಾವ್) ಅವರ ಐತಿಹಾಸಿಕ ಕಾದಂಬರಿ-ಚದುರಂಗದ ಮನೆ. ನಾಗರವಳ್ಳಿ ಎಂಬುದು ನಾಗರಹೊಳೆ ನದಿ ದಂಡೆಯ ಮೇಲಿನ ಒಂದು ಊರು. ಇಲ್ಲಿಯ ಶಂಕರ ನಾರಾಯಣ ಸ್ವಾಮಿ ದೇವಾಲಯದ ಸುತ್ತಮುತ್ತಲಿರುವ ಬ್ರಾಹ್ಮಣರ ಮನೆಗಳಿದ್ದು,, ಈ ಮನೆಗಳ ಮಧ್ಯೆ ಎದ್ದು ಕಾಣುವುದೇ ಚದುರಂಗದ ಮನೆ. ಪೂನಾದ ದೇಶಸ್ತ ಬ್ರಾಹ್ಮಣ ಮಾಧವರಾಯ, ಟಿಪ್ಪುಸುಲ್ತಾನನ ಕಾಲದಲ್ಲಿ ಪರಶುರಾಮ ಭಾವುನ ಸೇನೆಯಲ್ಲಿರುತ್ತಾನೆ. ಶೃಂಗೇರಿ ಅಮ್ಮನ ದೇವಸ್ಥಾನ ಲೂಟಿ ಮಾಡಿದ ಈ ಸೇನೆ, ಒಡವೆಗಳನ್ನು ದೋಚಿರುತ್ತದೆ. ಈ ಒಡವೆಗಳ ಮೇಲೆ ಮಾಧವರಾಯನಿಗೆ ಆಸೆ ಹೆಚ್ಚಿ, ಆ ಒಡವೆಗಳೊಂದಿಗೆ ಪರಾರಿಯಾಗುತ್ತಾನೆ. ಹಾಗೆ ಓಡಿ ಬಂದ ಮಾಧವರಾಯ ನಾಗರವಳ್ಳಿಯಲ್ಲಿ ನೆಲೆಸುತ್ತಾನೆ. ಈತನ ಸುತ್ತ ಹೆಣೆದಿರುವ ಐತಿಹಾಸಿಕ ಕಥೆ ಇದು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE