ಖ್ಯಾತ ಕವಿ, ಕತೆಗಾರ, ಚಿತ್ರ ಸಾಹಿತಿ, ನಾಟಕಕಾರ ಲೇಖಕರಾದ ಜಯಂತ್ ಕಾಯ್ಕಿಣಿ ಅವರ ಅಂಕಣ ಬರಹಗಳ ಸಂಗ್ರಹ ’ಬೊಗಸೆಯಲ್ಲಿ ಮಳೆ’.
91 ಅಂಕಣ ಬರಹಗಳನ್ನು ಒಳಗೊಂಡಿರುವ ಬೊಗಸೆಯಲ್ಲಿ ಮಳೆ ಕೃತಿಯು ಲೇಖಕರ ಹಲವು ವರ್ಷಗಳ ಅಲೆಮಾರಿತನದ ಅನುಭವಗಳನ್ನು ತಿಳಿಸುವಂತದ್ದು. ಬಹುತೇಕ ಅಧ್ಯಾಯಗಳಲ್ಲಿ ಉತ್ತರ ಕನ್ನಡದ ಅದರಲ್ಲೂ ಗೋಕರ್ಣದ ಜೊತೆಗಿನ ಆಪ್ತತೆ, ದರ್ಶನ, ತತ್ಪರತೆ ತುಡಿತಗಳ ರೂಪವಾಗಿ ರೂಪಗೊಂಡಿವೆ. ಒಂದು ಕಾಲಕ್ಕೆ ಅವರ ಕಾಯಕ ಭೂಮಿಯಾದ ಮುಂಬೈ ನಗರದ ಮೇಲಿನ ಅಪ್ಪಟ ಪ್ರೀತಿ ಮತ್ತು ಅಲ್ಲಿನ ಜೀವಯಾನದ ಯಥಾಸ್ಥಿತಿಯನ್ನು ಒಪ್ಪಿಕೊಳ್ಳಬೇಕಾದ ಸಕಾರಾತ್ಮಕ ಅನಿವಾರ್ಯತೆ, ಸಾಮಾಜಿಕ, ನಗರಕೇಂದ್ರಿತ ಸೂಕ್ಷ್ಮಗಳು, ಕ್ರೂರ ಹೃದಯಹೀನ ಶಹರುಗಳ ತಲ್ಲಣಗಳನ್ನು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.
ಗಾಳಿಯ ಮೈಗೆ ಮೆತ್ತಿದ ಕತ್ತಲು ಬೆಳಕು, ಒಂಟೆ ಮಕ್ಕಳು, ಮಾತಿರದ ನಲುಮೆ, ಶಬ್ದ ಜೀವಗಳಿಗೆ ಕಣ್ಣು ಕೊಟ್ಟವರು, ಕಾಗದದ ಕ್ಷಣ, ಬಾಲವನದ ಕೊಂಬೆಯಲ್ಲಿ ಒಂಟಿ ಜೋಕಾಲಿ, ನೈಟಿ ಮರ, ಪುಟ್ಟ ದೇವರ ಹೂವು, ನೋಡಲು ಕಣ್ಣಿದ್ದರೆ ಸಾಲದು !, ಡೆಡ್ ಮ್ಯಾನ್ ವಾಕಿಂಗ್ …ಆಲಾಪದ ಅಲೆಗಳು, ರಾತ್ರಿಯ ಹೆದ್ದಾರಿಗೊಂದು ಅಲ್ಪವಿರಾಮ, ಅದು ಬರೆ ಗೆಲುವಲ್ಲೊ ಅಣ್ಣಾ, ಸುಖ ಸಂಸಾರದ ಸಿನಿಮಾ ಸೂತ್ರಗಳು, ಈಗ ಎರಡು ನಿಮಿಷಗಳ ಮೌನ, ಗಂಡನಿಗಾಗಿಯೂ ಕನಕಾಂಬರದ ದಂಡೆ, ಪೋಗದಿರೆಲೋ ರಂಗ ಬಾಗಿಲಿನಿಂದಾಚೆಗೆ, ಸೂಜಿ ಕಳೆದರೆ ಮತ್ತೆ ಸಿಗುವುದಿಲ್ಲ, ಉಳಿದರ್ಧ ಎಲ್ಲಿದೆ?, ಚಿರಂತನ ಮತ್ತು ಒಂದು ದಿನ, ನೀಲಿಯಿಂದ ತೇಲಿ ಬರುವ ಹಿತದ ಹಾಡು, ಅವಶೇಷಗಳ ನಡುವೆ ಪ್ರತಿಧ್ವನಿ, ಒಡಲ ನೂಲಿನ ಜಾಲ, ಹೀಗೆ ಹಲವು ಅಂಕಣ ಬರಹಗಳನ್ನು ಈ ಕೃತಿ ಒಳಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ. ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...
READ MORE