ಭವದ ಕೇಡುಗಳನ್ನು ಸಂತೈಸುವಂತೆ ಜೋಳಿಗೆಯ ತುಂಬಾ ಕನಸುಗಳನ್ನೇ ತುಂಬಿಕೊಂಡಿರುವ ಕೃಷ್ಣ ರಾಯಚೂರು ಅವರ ‘ಬಿತ್ತಿಯ ಒಡಲು’ ಕವನಸಂಕಲನ ಭೌತಿಕವಾದ ಒಂದು ಚೌಕಟ್ಟನ್ನು ಪಡೆದುಕೊಂಡಿದೆ. ಇಲ್ಲಿನ ಅನೇಕ ಕವಿತೆಗಳು ಬೋದಿಲೇರನ ಬೆಂಕಿಗೆ ಕಿಚ್ಚು ಹಚ್ಚುವ, ನೀಲುವಿನ ಅಂತರಂಗದ ಕದ ತೆರೆಯುವ, ರೂಮಿಯ ಆಧ್ಯಾತ್ಮದ ಆಳಕ್ಕೆ ಇಳಿವ ವಿಸ್ತಾರತೆಯನ್ನು ಹೊಂದಿವೆ. ಪ್ರತಿಯೊಂದು ಶಬ್ಧಗಳು ಜುಗಲ್ ಬಂದಿ ನಡೆಸುತ್ತಾ, ಓದುಗರ ಎದೆಯಲ್ಲಿ ಮೌನದ ಅಲೆಗಳೇಳಿಸಿ ತುಟಿ ಅಂಚಿನಲ್ಲಿ ತುಳುಕುತ್ತವೆ. ಲೇಖಕನ ಭಾವಬಿತ್ತಿ ಜೋಳಿಗೆಯಲ್ಲಿ ಮಾನವೀಯತೆಯ ಅಗುಳುಗಳಿವೆ. ಬಣ್ಣ ಬಣ್ಣದ ಕನಸುಗಳಿವೆ ಎಂಬುದನ್ನು ನಾವು ಇಲ್ಲಿನ ಶಬ್ಧಗಳಲ್ಲಿ ಕಾಣಬಹುದು. ಕವನಸಂಕಲನದ ಕೊನೆಯಲ್ಲಿ ಕಿ.ರಂ.ನಾಗರಾಜ ಭಾಷಣ, ಎಲ್ಸಿ ನಾಗರಾಜ್, ಎಚ್.ಎ. ಅನಿಲ್ ಕುಮಾರ್, ಕೆ.ವೈ ನಾರಾಯಣಸ್ವಾಮಿ, ಮಂಜುನಾಥ ಎಸ್, ಮಹಾಂತೇಶ ನವಲ್ ಕಲ್, ಶಶಿಧರ್ ಭಾರಿಘಾಟ್, ಸುಮನ ನಾರಾಯಣ, ರಾಜು ಮಳವಳ್ಳಿ, ರಾಮದುರ್ಗ ದಿಲಾವರ ಸೇರಿದಂತೆ ಅನೇಕರ ಬರಹಗಳಿವೆ.
ಲೇಖಕ ಕೃಷ್ಣ ರಾಯಚೂರು ಕವಿ, ಕಲಾವಿದ. 1964ರಲ್ಲಿ ಜನನ. ಕನ್ನಡ, ಹಿಂದಿ, ಫ್ರೆಂಚ್ ಚಲನಚಿತ್ರಗಳಿಗೆ ಸಹ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅವರು ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವ ವೇದಿಕೆಗಳ ವಿನ್ಯಾಸ, ದೇವ್ ನಾಗೇಶ್ ನಂದನ ರಂಗತಂಡ ರೂಪಿಸಿದ 100 ಗಂಟೆಗಳ ನಿರಂತರ ನಾಟಕದ ರಂಗವಿನ್ಯಾಸಕ್ಕಾಗಿ ಲಿಮ್ಕಾ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕೃತಿಗಳು: ವಿನ್ಯಾಸದ ಹೊರಗೆ, ಜೋಳಿಗೆಯಲ್ಲೊಂದು ಅಗುಳು(ಕವನ ಸಂಕಲನ), ಬೆಂಡು ಬತಾಸು ...
READ MORE