ಭೀಮಾಮೃತ

Author : ದೇವೇಂದ್ರ ಕಟ್ಟಿಮನಿ

Pages 98

₹ 95.00




Year of Publication: 2020
Published by: ಅಭಿಜ್ಞಾನ ಪ್ರಕಾಶನ
Address: ಹಿಪ್ಪರಗ ಬಾಗ ತಾ. ಬಸವಕಲ್ಯಾಣ ಜಿ. ಬೀದರ-585437
Phone: 9880465181

Synopsys

ಡಾ.ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜೀವನಾಧಾರಿತ ಘಟನೆಗಳ ಕಾವ್ಯ-ಭೀಮಾಮೃತ. ಲೇಖಕರು ದೇವೇಂದ್ರ ಕಟ್ಟಿಮನಿ. ಈ ಕೃತಿ ‘ಮೂಕನಾಯಕ’ ಪತ್ರಿಕೆಯ ಶತಮಾನದ ಸವಿನೆನಪಿಗಾಗಿ (1920-2020) ರಲ್ಲಿ ಪ್ರಕಟಿಸಿದೆ. ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ ಅವರು ಆಧುನಿಕ ಭಾರತದ ನಿಮಾರ್ತೃ . ಏಕೆಂದರೆ, ಸಂವಿಧಾನದ ಮೂಲಕ ದೇಶಕ್ಕೆ ಕಾನೂನು ಕಲ್ಪಿಸಿಕೊಟ್ಟವರು. ಹರಿದ ಸಮಾಜವನ್ನು ಗಟ್ಟಿಯಾಗಿ ಹೊಲೆದವರು. ಹೊಸ ಆರ್ಥಿಕ ನೀತಿಯನ್ನು ತಂದುಕೊಟ್ಟವರು. ಮೇಣದ ಬತ್ತಿಯಂತೆ ತಾನು ಸುಟ್ಟು ಸಮಾಜಕ್ಕೆ ಬೆಳಕು ಕೊಟ್ಟವರು , ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾನ ಚೇತನ. ಇಂತಹ ಅಂಬೇಡ್ಕರ ಬದುಕಿನ ಕುರಿತು ನಾಲ್ಕು ಸಾಲುಗಳ ಖಂಡಕಾವ್ಯದಲ್ಲಿ ಮೂಡಿಬಂದ ಕೃತಿ ಇದಾಗಿದೆ.

ಭಾರತದಲ್ಲಿ ಅಂದಿನ ಧರ್ಮದಲ್ಲಿ ವರ್ಣವ್ಯವಸ್ಥೆಯ ಅಸಮಾಧಾನಗಳು, ಜಾತಿಯತೆಯ ಹೀನ ಕೃತ್ಯಗಳು, ಅಂದಿನ ಸಮಾಜದಲ್ಲಿನ ಅಸಮತೋಲನ ಸ್ಥಿತಿಯ ಅಸಮಾಧಾನಗಳು, ಮಹಿಳಾ ಶೋಷಣೆಯ ಘಟನೆಗಳು ಮತ್ತು ಅಲ್ಲಿ ನಡೆಯುವ ಷಡ್ಯಂತ್ರಗಳ ಕುರಿತು ಅಂಬೇಡ್ಕರರ ವಾದಗಳು, ತುಳಿತಕ್ಕೆ ಒಳಪಟ್ಟ ಜಾತಿಗಳ ಸಬಲೀಕರಣಕ್ಕಾಗಿ ಶಾಹು ಮಹಾರಾಜರ ನೀತಿಗಳು, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಯೋಜನೆಗಳ ಸುತ್ತ ಬಸವಣ್ಣನವರ ವೈಚಾರಿಕ ಪ್ರಜ್ಞೆಗಳು ಸುಳಿದಾಡಿದೆ.

ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಗುರುನಾರಾಯಣ, ಪೆರಿಯಾರ ರಾಮಸ್ವಾಮಿಯ ನೆನೆಯುತ್ತ, ಭಾರತದ ಇತಿಹಾಸದಲ್ಲಿ ಬೌದ್ಧ ಧರ್ಮದ ಪಾತ್ರ, ಭವ್ಯ ಭಾರತಕ್ಕೆ ದಿವ್ಯ ಶಕ್ತಿ ಮೂಲ ಎಲ್ಲಿದೆ ಎಂಬುದು ಕೆಲವು ಹಳೆಗನ್ನಡದ ಪದಗಳೊಂದಿಗೆ, ಕೆಲವು ಪ್ರಕೃತಿಯ ನಿದರ್ಶನಗಳು ನೀಡಿ ಬರೆಯುವದರೊಂದಿಗೆ, ಅಂಬೇಡ್ಕರ ಗುರುವಿನ ನಾಮವನ್ನು ಜಗತ್ತಿಗೆ ತೋರಿಸಿದ ಶಿಷ್ಯನ ಔದಾರ್ಯವನ್ನು ಇಲ್ಲಿ ಮೂಡಿ ಬಂದಿದೆ. 

 

About the Author

ದೇವೇಂದ್ರ ಕಟ್ಟಿಮನಿ
(05 September 1983)

ಕವಿ ದೇವೇಂದ್ರ ಕಟ್ಟಿಮನಿ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗಬಾಗ ಗ್ರಾಮದವರು. ತಂದೆ ಅಂಬಣ್ಣ ಕಟ್ಟಿಮನಿ , ತಾಯಿ  ಕಾಶಿಬಾಯಿ, ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಪಿಯುಸಿ ಹಾಗೂ ಪದವಿ ಶಕ್ಷಣ ಕಮಲಾಪುರದಲ್ಲಿ, ರಾಯಚೂರಿನಲ್ಲಿ  ಬಿ.ಪಿ.ಇಡಿ ಶಿಕ್ಷಣ, ಶಿವಮೊಗ್ಗದ ಕುವೆಂಪು ವಿ.ವಿ.ಯಲ್ಲಿ ಎಂ.,ಎ. ಪದವೀಧರರು. ಸದ್ಯ, ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ.   ಕಥೆ,ಕವನ ರಚನೆ, ಯೋಗಾಭ್ಯಾಸ, ರೆಡ್ ಕ್ರಾಸ್ ಮತ್ತು ಸ್ಕೌಟಿಂಗ್ ಮೂಲಕ ಸೇವೆ ಸಲ್ಲಿಸುವ ಇವರು, 2019 ರಿಂದ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ  ಶ್ರೀ ಅಂಬಣ್ಣ ಕಟ್ಟಿಮನಿ ಸ್ಮರಣಾರ್ಥ ಅಭಿಜ್ಞಾನ ಪ್ರಶಸ್ತಿ ಪ್ರಾರಂಭಿಸಲಾಗಿದೆ. 2020 ರಲ್ಲಿ ರಾಯಚೂರಿನಲ್ಲಿ ಶ್ರೀ ಕೆ.ತಿಮ್ಮಯ್ಯ ...

READ MORE

Related Books