ಭಾವದೊಲದ ಬೆಳೆಗಳು

Author : ಮಮತಾಪ್ರಭು

Pages 104

₹ 100.00




Year of Publication: 2022
Published by: ಮಮತಾ ಪ್ರಭು
Address: ಹಾಸನ
Phone: 919844242541

Synopsys

‘ಭಾವದೊಲದ ಬೆಳೆಗಳು’ ಮಮತಾ ಪ್ರಭು ಅವರ ಲೇಖನಗಳ ಸಂಗ್ರಹವಾಗಿದೆ. ಮಣ್ಣಿಂದಲೇ ಸಕಲವನ್ನೂ ಪಡೆದು ಸಿರಿವಂತರಾಗಿರುವ ನಾವು ಮಣ್ಣನ್ನು ಅಸಡ್ಡೆಯಾಗಿ ಕಾಣುವುದಕ್ಕೆ ಒಂದೆರಡು ಉದಾಹರಣೆಗಳು. ಸಕಾಲಕ್ಕೆ ಉಪಾಯ ಯೋಚಿಸದವನನ್ನು ಕುರಿತು “ನಿನ್ನ ಬುದ್ಧಿ ಏನು ಮಣ್ ತಿಂತಿತ್ತ', ನಿನ್ ತಲೆಲ್ಲಿ ಏನ್ ಮಣ್ಣು ತುಂಬಿಕೊಂಡಿದ್ದಾ? ಅಲ್ಲೇನ್ ಸಿಗುತ್ತೆ ನಿಮಗೆ ಬರೀ ಮಣ್ಣು, ಎಲ್ಲ ಮುಗೋಯ್ತು ಮಣ್ಣು ತಿನ್ನು... ಹೀಗೆ ಆಡುವ ವಾಕ್ಯಗಳ ಒಳಾರ್ಥಗಳಲ್ಲಿ ಗೌಪ್ಯವಾಗಿ ಮಣ್ಣಿನ ಮಹತ್ವ ಇರುವುದು ನನ್ನ ಜ್ಞಾನಕ್ಕೆ ತೋರುತ್ತಿಲ್ಲ. ಆದರೆ ಮೇಲ್ನೋಟಕ್ಕೆ ಮಣ್ಣಿನ ಬಗೆಗಿನ ಉಡಾಫೆ ಮಾತ್ರ ಈ ವಾಕ್ಯಗಳಲ್ಲಿ ಕಾಣುತ್ತಿದೆ ನನಗೆ. ಮಣ್ಣನ್ನು ಮಣ್ಣಾಗಿಯೇ ಪ್ರೀತಿಸುವ ಆಧ್ರ್ರತೆ ನಮ್ಮ ಹೃದಯಗಳಿಗೆ ಇಲ್ಲವಾಗಿದೆ. ಮಣ್ಣನ್ನು ಕೆಸರಾಗಿ, ಧೂಳಾಗಿ, ಕಸವಾಗಿ ಕಂಡು ತುಚ್ಛ ಭಾವ ಭಾವಿಸುವ ನಾವು ಮಣ್ಣಿಂದ ಮರ, ಮರದಿಂದ ಉಸಿರು, ಮಣ್ಣಿಂದ ಅನ್ನ, ಮಣ್ಣಿಂದ ಚಿನ್ನ, ಮಣ್ಣಿಂದ ಹಣ್ಣು, ಮಣ್ಣಿಂದಲೇ ಬಣ್ಣ -ಬದುಕು ಎಲ್ಲವನ್ನೂ ಪಡೆಯುತ್ತೇವೆ.. ಆದರೆ ಅದನ್ನು ಅದರ ಸರ್ವ ರೂಪದಲ್ಲಿಯೂ ಪ್ರೀತಿಸುವುದನ್ನು ಮಾತ್ರ ಕಲಿಯಲಿಲ್ಲ. ಮಣ್ಣನ್ನು ಕೇವಲ ಹೊಲ, ಗದ್ದೆ, ತೋಟ, ಹೋಂಸ್ಟೇ, ರೆಸ್ಟೋರೆಂಟ್, ಎಸ್ಟೇಟ್ ಗಳ ರೂಪದಲ್ಲಿ ಪ್ರೀತಿಸುವ, ಆರಾಧಿಸುವ, ಬೀಗುವ, ಮೆರೆಯುವ, ಆಳುವ ನಾವು ಪ್ರತಿಕ್ಷಣ ಅದನ್ನು ತುಳಿಯುವಾಗ, ಉಗಿಯುವಾಗ, ಅಗೆಯುವಾಗ, ಹೊಲಸು ಎಸೆಯುವಾಗ ಕ್ಷಮೆ ಕೇಳುತ್ತಾ, ಅದರ ಧಾರಣಶಕ್ತಿಯನ್ನು ಹೊಗಳುತ್ತಾ, ಸಹನಾಶಕ್ತಿಗೆ ನಮಿಸುವುದೇ ಕರ್ತವ್ಯ ಅನಿಸುತ್ತದೆ.

About the Author

ಮಮತಾಪ್ರಭು

ಮಮತಾಪ್ರಭು ಮೂಲತಃ ಹಳೇಬೀಡಿನವರು. ತಂದೆ ಪರಮೇಶ್ವರಪ್ಪ ತಾಯಿ ಶಾರದಮ್ಮ .ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಲೇಖಕಿಯಾಗಿದ್ದಾರೆ.  ಪ್ರಸ್ತುತ್ತ ಕರ್ನಾಟಕ ಪಬ್ಲಿಕ್ ಶಾಲೆ ಹಳೇಬೀಡು ಅಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಕೃತಿಗಳು: ಭಾವದೊಲದ ಬೆಳೆಗಳು (ಲೇಖನ ಸಂಕಲನ), ದರಗುಟ್ಟಿ ಮಳೆ ಸುರಿದು (ಕಾದಂಬರಿ) ...

READ MORE

Related Books