‘ಭಾಷಾಂತರ: ಒಂದು ಕಲಾತ್ಮಕ ಅಭಿವ್ಯಕ್ತಿ’ ಕೃತಿಯು ಎಸ್.ಆರ್. ಭಟ್ ಅವರು ಲೇಖನಸಂಕಲನವಾಗಿದೆ. ಭಾಷಾಂತರ ಪ್ರಕ್ರಿಯೆಯನ್ನು ವಿವಿಧ ಆಯಾಮಗಳಿಂದ ನಿರ್ವಚಿಸುವ ಕೆಲಸವನ್ನು ಈ ಕೃತಿಯು ಮಾಡುತ್ತದೆ. ಜಗತ್ತಿನಲ್ಲಿ ಅಸಂಖ್ಯ ಭಾಷೆಗಳು ಸೃಷ್ಟಿಯಾದದ್ದು ಬೇರೆ ಬೇರೆ ಭಾಷೆಗಳ ಜನ ಪರಸ್ಪರ ಸಂವಹನ ನಡೆಸಲು ತಿಣುಕಾಡಿದ್ದು ಆನಂತರ ಇದಕ್ಕೆ ಒಂದು ಅದ್ಭುತ ಪರಿಹಾರವೆಂಬಂತೆ ಭಾಷಾಂತರ ಪರಿಕಲ್ಪನೆ ಹುಟ್ಟಿಕೊಂಡಿದ್ದು -ಇದನ್ನೆಲ್ಲ ಕಲಾತ್ಮಕವಾಗಿ ಒಂದು ಪೌರಾಣಿಕ ಕಥೆಯೆಂಬಂತೆ ನಿರೂಪಿಸುವ ಲೇಖಕರು ವಿವಿಧ ಮಾದರಿಯ ಭಾಷಾಂತರಗಳನ್ನು ವಿಶ್ಲೇಷಿಸುತ್ತಾರೆ, ವಿಮರ್ಷಿಸುತ್ತಾರೆ. ಆದರ್ಶ ಭಾಷಾಂತರವು ಹೇಗಿರಬೇಕು ಎಂಬುದರ ಕುರಿತು ಹಲವು ಹೊಳಹುಗಳನ್ನು ನೀಡುತ್ತಾರೆ. ಗ್ರೀಕ್ ಪುರಾಣ ಸಾಹಿತ್ಯ, ಯೂರೋಪಿಯನ್ ಸಾಹಿತ್ಯ, ಭಾರತೀಯ ಪುರಾಣ -ಸಾಹಿತ್ಯ, ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಚರ್ಚೆಯನ್ನು ಬೆಳೆಸುವ ಮತ್ತು ವಿವಿಧ ಅನುವಾದದ ಮಾದರಿಗಳ ತುಲನೆ/ವಿಶ್ಲೇಷಣೆ ಮಾಡುವ ಎಸ್. ಆರ್. ಭಟ್ ಅವರು ಅನುವಾದದ ಸಂದರ್ಭದಲ್ಲಿ ಅನುವಾದಕನು ವಹಿಸಬೇಕಾದ ಎಚ್ಚರಗಳಾವುವು ಎಂಬುದನ್ನು ತಿಳಿಸುತ್ತಾರೆ.
(ಹೊಸತು, ನವೆಂಬರ್ 2012, ಪುಸ್ತಕದ ಪರಿಚಯ)
ಕಳೆದ ಮೂರು ನಾಲ್ಕು ದಶಕಗಳಿಂದ ಭಾಷಾಂತರ ಮೀಮಾಂಸೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಒಂದು ಕಾಲಕ್ಕೆ ಅಂತರ್ ಶಿಸ್ತೀಯ ಅಧ್ಯಯನ ಮತ್ತು ತೌಲನಿಕ ಸಾಹಿತ್ಯ ಅಧ್ಯಯನಗಳ ಭಾಗವಾಗಿದ್ದ ಭಾಷಾಂತರ ಮೀಮಾಂಸೆಯು ಇತ್ತೀಚಿನ ದಿನಗಳಲ್ಲಿಯಂತೂ ಒಂದು ಪ್ರತ್ಯೇಕ ಜ್ಞಾನಶಿಸ್ತಾಗಿ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿಯು ಬಹಳ ಮುಖ್ಯವೆನಿಸುತ್ತದೆ. ಈ ಕೃತಿಯು ಗಾತ್ರದಲ್ಲಿ ಪುಟ್ಟದಾಗಿದ್ದರೂ ಭಾಷಾಂತರ ಪ್ರಕ್ರಿಯೆಯನ್ನು ವಿವಿಧ ಆಯಾಮಗಳಿಂದ ನಿರ್ವಚಿಸುವ ಕೆಲಸವನ್ನು ಮಾಡುತ್ತದೆ. ಜಗತ್ತಿನಲ್ಲಿ ಅಸಂಖ್ಯ ಭಾಷೆಗಳು ಸೃಷ್ಟಿಯಾದದ್ದು ಬೇರೆ ಬೇರೆ ಭಾಷೆಗಳ ಜನ ಪರಸ್ಪರ ಸಂವಹನ ನಡೆಸಲು ತಿಣುಕಾಡಿದ್ದು ಆನಂತರ ಇದಕ್ಕೆ ಒಂದು ಅದ್ಭುತ ಪರಿಹಾರವೆಂಬಂತೆ ಭಾಷಾಂತರ ಪರಿಕಲ್ಪನೆ ಹುಟ್ಟಿಕೊಂಡಿದ್ದು -ಇದನ್ನೆಲ್ಲ ಕಲಾತ್ಮಕವಾಗಿ ಒಂದು ಪೌರಾಣಿಕ ಕಥೆಯೆಂಬಂತೆ ನಿರೂಪಿಸುವ ಲೇಖಕರು ವಿವಿಧ ಮಾದರಿಯ ಭಾಷಾಂತರಗಳನ್ನು ವಿಶ್ಲೇಷಿಸುತ್ತಾರೆ, ವಿಮರ್ಷಿಸುತ್ತಾರೆ. ಆದರ್ಶ ಭಾಷಾಂತರವು ಹೇಗಿರಬೇಕು ಎಂಬುದರ ಕುರಿತು ಹಲವು ಹೊಳಹುಗಳನ್ನು ನೀಡುತ್ತಾರೆ. ಗ್ರೀಕ್ ಪುರಾಣ ಸಾಹಿತ್ಯ, ಯೂರೋಪಿಯನ್ ಸಾಹಿತ್ಯ, ಭಾರತೀಯ ಪುರಾಣ -ಸಾಹಿತ್ಯ, ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಚರ್ಚೆಯನ್ನು ಬೆಳೆಸುವ ಮತ್ತು ವಿವಿಧ ಅನುವಾದದ ಮಾದರಿಗಳ ತುಲನೆ/ವಿಶ್ಲೇಷಣೆ ಮಾಡುವ ಎಸ್. ಆರ್. ಭಟ್ ಅವರು ಅನುವಾದದ ಸಂದರ್ಭದಲ್ಲಿ ಅನುವಾದಕನು ವಹಿಸಬೇಕಾದ ಎಚ್ಚರಗಳಾವುವು ಎಂಬುದನ್ನು ತಿಳಿಸುತ್ತಾರೆ. ವಸ್ತು-ವಿಷಯಕ್ಕೆ ಸಂಬಂಧಿಸಿದಂತೆ ಅನುವಾದಕನು ಮೂಲಕ್ಕೆ ನಿಷ್ಠವಾಗಿರಬೇಕು ಎನ್ನುವ ಇವರು, ಭಾಷೆಯ ವಿಷಯದಲ್ಲಿ ಅನುವಾದಕನು ಉದ್ದಿಷ್ಟ ಭಾಷೆಗೆ ನಿಷ್ಠನಾಗಿರಬೇಕು ಎನ್ನುತ್ತಾರೆ.