ಲೈಂಗಿಕತೆಯ ಸಂಕೀರ್ಣತೆಯನ್ನು ಬಿಚ್ಚಿಟ್ಟು ಪೂರ್ವಗ್ರಹಗಳನ್ನು ಕೆಣಕುವ ಮತ್ತು ಅರಿವನ್ನು ಹಿಗ್ಗಿಸುವ ವಿಶಿಷ್ಟ ಕೃತಿ ಬೆತ್ತಲೆವೃಕ್ಷ. ಭಾರತದ ಸಂದರ್ಭದಲ್ಲಿ ಲೈಂಗಿಕತೆಯ ಕುರಿತಾಗಿ ನಡೆದಿರುವ ಹುಡುಕಾಟ ಮತ್ತು ಪ್ರಯೋಗಗಳ ಸುತ್ತ ಸಾಂಸ್ಕೃತಿಕ ಮುಕ್ತತೆಗಳಿರುವಂತೆಯೇ ವಿನಾಶಕಾರಿ ಮಂಡಿವಂತಿಕೆಯೂ ಇದೆ.ಸಾಮಾಜಿಕ ರಚನೆಗಳನ್ನೇ ನಿಯಂತ್ರಣ ಮಾಡಲು ಲೈಂಗಿಕತೆಯನ್ನು ಟೂಲಾಗಿ ಬಳಸಲ್ಪಡುವ ಬಗ್ಗೆ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಈ ಕೃತಿ ಚರ್ಚಿಸಿದೆ. ವೇದ, ವಾತ್ಸಾಯನನ ಕಾಮಸೂತ್ರದಂತಹ ಕೃತಿಗಳಲ್ಲಿ ಬರುವ ಲೈಂಗಿಕತೆಯ ವಿಚಾರಗಳನ್ನು ಈ ಕಾಲದ ಲೈಂಗಿಕ ರಾಜಕಾರಣದ ಜೊತೆಗಿಟ್ಟು ವಿಶ್ಲೇಷಿಸುವಂತೆಯೇ, ಗಾಂಧಿ ಮತ್ತು ಓಶೋ ಅಂತವರ ಲೈಂಗಿಕತೆಯ ಕುರಿತಾದ ದೃಷ್ಟಿಕೋನಗಳ ಚರ್ಚೆಯನ್ನು ಈ ಕೃತಿ ಒಳಗೊಂಡಿರುವುದು ಮಹತ್ವದ್ದಾಗಿದೆ ಎಂದು ಕೆ. ಮುರಳಿ ಮೋಹನ್ ಕಾಟಿ ಪುಸ್ತಕದ ಕುರಿತು ಬರೆದಿದ್ದಾರೆ.
ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ, ಬೆಂಗಳೂರು ವಿ.ವಿ.ಯಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಮೈಸೂರು ಮುಕ್ತ ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಕೃತಿಗಳು: ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್ ಲ್ಯಾಂಡ್ ಎಂಬ ಮುಗುಳ್ನಗೆ ...
READ MORE