ಬೇರು ಒಣಗಿದೆ ಪ್ರೀತಿ

Author : ಬಿ.ಎನ್. ಮಲ್ಲೇಶ್

Pages 64

₹ 12.00




Year of Publication: 1990
Published by: ಅನ್ವೇಷಣೆ ಪ್ರಕಾಶನ
Address: # 478, 11ನೇ ಎಂ.ಸಿ. ಲೇಔಟ್ ರಸ್ತೆ, ವಿಜಯನಗರ, ಬೆಂಗಳೂರು-560040

Synopsys

ಲೇಖಕ ಬಿ.ಎನ್. ಮಲ್ಲೇಶ್ ಅವರ ಕವನ ಸಂಕಲನ-ಬೇರು ಒಣಗಿದೆ ಪ್ರೀತಿ. ಇದು (1990) ಅವರ ಮೊದಲ ಕವನ ಸಂಕಲನ. ಒಟ್ಟು 20 ಕವನಗಳಿವೆ. ಕೃತಿಗೆ ಕುಂ. ವೀರಭದ್ರಪ್ಪ ಅವರ ಮುನ್ನುಡಿ, ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ಅವರು ಬೆನ್ನುಡಿ ಬರೆದಿದ್ದಾರೆ.   ಪುಸ್ತಕ ಬಿಡುಗಡೆ ಮಾಡಿದ್ದ ಖ್ಯಾತ ಬಂಡಾಯ ಕವಿ ಬರಗೂರು ರಾಮಚಂದ್ರಪ್ಪ ಅವರು ‘ಇದು ಈ ಕಾಲಘಟ್ಟದ ಅತ್ಯಂತ ಗಮನಾರ್ಹ ಕೃತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರ 'ಬಾಂಬು ತುಟಿಗಳ ನಡುವೆ ಇರುಳು ಕಾಯಲಿ ಇನ್ನು' , 'ಅಚ್ಚರಿಗೊಬ್ಬಳು ಪಿ.ಟಿ. ಉಷಾ' , 'ದ್ರೋಣರ ದ್ರೋಹವನ್ನು ಕುರಿತು' ಇತ್ಯಾದಿ ಪದ್ಯಗಳು ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಗ್ರಹಕ್ಕೆ ಸೇರ್ಪಡೆ ಯಾದವು.

 

About the Author

ಬಿ.ಎನ್. ಮಲ್ಲೇಶ್

ಲೇಖಕ ಬಿ.ಎನ್. ಮಲ್ಲೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಬಡಗರಹಳ್ಳಿ ಗ್ರಾಮದವರು. ಆದರೆ, ದಾವಣಗೆರೆಯಲ್ಲಿ ವಾಸ. ವೃತ್ತಿಯಿಂದ ಪತ್ರಕರ್ತರು. ಎಂ.ಎ. ಎಲ್.ಎಲ್.ಬಿ ಪದವೀಧರರು. ದಾವಣಗೆರೆ ನಗರವಾಣಿ ದಿನಪತ್ರಿಕೆಯ ಸಹ ಸಂಪಾದಕರು. ಉದಯ ಟಿವಿಯ ಜಿಲ್ಲಾ (1998-2018) ವರದಿಗಾರರು. ದಾವಣಗೆರೆ ವಿಶ್ವವಿದ್ಯಾಲಯದ ಅಕಾಡೆಮಿ ಕೌನ್ಸಿಲ್ ಸದಸ್ಯರು.  ಕೃತಿಗಳು: ಬ್ರೇಕಿಂಗ್ ನ್ಯೂಸ್  (ವಿಡಂಬನೆ) ಮತ್ತು ತೆಪರೇಸಿ ರಿಟರ್ನ್ಸ್ (ವಿಡಂಬನಾತ್ಮಕ ಬರಹಗಳು)  ಬೇರು ಒಣಗಿದೆ ಪ್ರೀತಿ ಮತ್ತು ಟ್ರ್ಯಾಕುಗಳ ಮೇಲೆ ಹುಣ್ಣಿಮೆ ( ಕವನ ಸಂಕಲನಗಳು ) ಪ್ರಶಸ್ತಿ-ಗೌರವಗಳು: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಗುಲಬರ್ಗಾದ ಅಮ್ಮ ಪ್ರಶಸ್ತಿ, ದಾವಣಗೆರೆಯಲ್ಲಿ ಮಹಾಲಿಂಗರಂಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.    ...

READ MORE

Related Books