`ಬೆಳವಡಿಯ ಬೆಳಕು’ ಕೃತಿಯು ಸಂತೋಷ ಶಂ. ಯಕ್ಕುಂಡಿಯವರು ಕವನ ಸಂಕಲನವಾಗಿದೆ. ಕೃತಿಯಲ್ಲಿ 53 ಕವನಗಳಿದ್ದು, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದರು ಮೊದಲಾದ ಮಹಾನ್ ವ್ಯಕ್ತಿಗಳ ಬಗ್ಗೆ ಹಾಗೂ ಬೆಳಗಾವಿ, ಧಾರವಾಡ, ಬಳ್ಳಾರಿ ಜಿಲ್ಲೆಗಳ ಸಾಂಸ್ಕೃತಿಕ, ಸಾಮಾಜಿಕ, ಭೌಗೋಳಿಕ, ರಾಜಕೀಯ, ಶೈಕ್ಷಣಿಕ ವಿಷಯಗಳು, ಕನ್ನಡ ನಾಡಿನ ಬಗ್ಗೆ, ಲೇಖಕರ 40 ವರ್ಷಗಳ ಜೀವನದ ಸಿಹಿ ಕಹಿಯ ಅನುಭವಗಳಾದ ಬಡತನ, ಶಿಕ್ಷಣ, ಉದ್ಯೋಗ, ವಿವಾಹ, ಪ್ರೀತಿ, ಕುಟುಂಬ, ಹತಾಶೆ, ಗುರಿ, ಚುಟುಕುಗಳು, ಒಡಪುಗಳು ಮೊದಲಾದ ವಿಷಯಗಳ ಕುರಿತಾಗಿ ಕವನಗಳು ಬಹು ಸುಂದರವಾಗಿ ಮೂಡಿ ಬಂದಿವೆ.