‘ಬರುವಳು’ ಸ್ಟ್ಯಾನಿ ಲೋಪಿಸ್, ಕಾರ್ಗಲ್ ಅವರ ಕಾದಂಬರಿಯಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ ದುಬೈ ಅನ್ನುವುದು ಎಲ್ಲರಿಗೂ ತಿಳಿದಿರುವ ದೇಶ. ಇಲ್ಲಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುವ ಸುಧಾಳ ಕತೆ ಇದು. ಸುಧಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಕೊಂಡವಳು ಭಾರತ ತೊರೆದು ಅಲ್ಲಿಗೆ ಹೋಗಿ ನೆಲಸಿದ ನಂತರ ಅವಳ ಬದುಕು ಎಲ್ಲರ ಬದುಕಿನಂತೆ ಸಾಗುವಾಗ ಇಡೀ ವಿಶ್ವವನ್ನ ಕಾಡಲು ಬಂದ ಕೆಟ್ಟ ಕಾಯಿಲೆ ಇವಳನ್ನ , ಇವಳ ಹತ್ತಿರದ ಸಂಬಂಧಿಕರನ್ನು ಕಾಡಲು ಆಗಮಿಸುತ್ತದೆ. ಆ ಹೊತ್ತಿಗೆ ಕಥಾ ನಾಯಕಿ ಸುಧಾ ಗರ್ಭವತಿಯಾಗಿ ದೇಶಕ್ಕೆ ತಿರುಗಿ ಬಂದಿರುತ್ತಾಳೆ. ಸುಧಾ ಹಾಗೂ ಅವಳ ಸಂಬಂಧಿಕರು ಇಡೀ ವಿಶ್ವವನ್ನ ಆಕ್ರಮಿಸುತ್ತಿರುವ ಕರೋನ ರೋಗದ ಭೀತಿ ಎಲ್ಲರನ್ನು ಆಕ್ರಮಿಸಿ ಕೊಳ್ಳುತ್ತದೆ.
ಸ್ಟ್ಯಾನಿ ಲೋಪಿಸ್ ಕಾರ್ಗಲ್- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ 11-01-1990ರಲ್ಲಿ ಜನಿಸಿದರು. ತಂದೆ ಜೋಸೆಫ್ ಲೋಪಿಸ್, ತಾಯಿ ಸೌರೀನ್ ಲೋಪಿಸ್. ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾರ್ಗಲ್ ನಲ್ಲಿ, ಪದವಿ ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದರು. ಎಂ.ಎ ಹಾಗೂ ಬಿಇಡಿ ಪದವೀಧರರು. ಸಾಗರದ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ. ರಾಜ್ಯ ಮಟ್ಟದ ಯುವಜನ ಮೇಳ ಏಕಪಾತ್ರಾಭಿನಯದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ. ಹಲವು ಕಥೆ,ಕವನ, ನಾಟಕಗಳನ್ನು ಬರೆದಿದ್ದಾರೆ. ಅನೇಕ ಕಥೆಗಳು ಭದ್ರಾವತಿ ಆಕಾಶವಾಣಿಯಿಂದ ಪ್ರಸಾರವಾಗಿದೆ.'ಮನದ ಕೂಗು' ಕವನ ಸಂಕಲನ , 'ದುಡುಕಿದ ಜೀವ' ಕಥಾಸಂಕಲನ. 'ಹಾಡು-ಪಾಡು' ಸಾಮಾಜಿಕ ಭಾವಗೀತೆಗಳ ಧ್ವನಿಸುರುಳಿಯೂ ಬಿಡುಗಡೆಯಾಗಿದೆ. ' ...
READ MORE