‘ಬಂದರಿಗೆ ಬಂದ ಹಡಗು’ ಕವಿ ವಾಸುದೇವ ನಾಡಿಗ್ ಅವರ ಕವನ ಸಂಕಲನ. ರಾಜಶೇಖರ ಮಠಪತಿ(ರಾಗಂ) ಈ ಸಂಕಲನದಲ್ಲಿ ಕವನ ರೂಪದ ಹಿನ್ನುಡಿಯನ್ನು ಬರೆದಿದ್ದಾರೆ. ಇವನಂಥ ಗೊಲ್ಲ ಮತ್ತೊಬ್ಬನಿಲ್ಲ ಸಲ್ಲದ್ದು, ಅಲ್ಲದ್ದು, ಇಲ್ಲದ್ದು ಎಲ್ಲ ಸಮಾವಿಷ್ಠಗೊಳಿಸಿಕೊಂಡು ಹೊಸರಾಗ ಸಂಯೋಜಿಸಿಕೊಂಡು ಹಾಡುತ್ತ ಬಂದೇ ಬಿಡುತ್ತಾನೆ ಸಂಭವಾಮಿ ಯುಗೇ ಯುಗೇ ಎನ್ನುತ್ತ. ಇವನು ವೃಷಭಾಚಲದ ಕನಸೋ ಭವದ ಹಕ್ಕಿಯೋ ಗೊತ್ತಿಲ್ಲ ನನಗೆ. ಹಾಡುಗಬ್ಬದ ಈ ಕಾವ್ಯ ಕಾಡಿನ ಗೊಲ್ಲ ಕೊಟ್ಟ ವಿರಕ್ತರ ಬಟ್ಟೆಗಳ ತೊಟ್ಟು, ಇವನ ಕರುಳ ಕಾವ್ಯಕೆ ಕಿವಿಗೊಟ್ಟು ನಾನೂ ಕುಳಿತಿದ್ದೇನೆ. ಜಗವೆಂಬ ಹೊಸ್ತಿಲು ಹಿಮಾಲಯದ ಮಧ್ಯೆ ಇವನ ಅನುಕ್ತದ ಧ್ಯಾನದ ಹಣತೆ ಹಚ್ಚಿಕೊಂಡು ಹುಡುಕುತ್ತಲೇ ಇದ್ದೇನೆ. ಕುದಿವ ಅಕ್ಷರ ಪಾತ್ರೆಯ ಅಕ್ಷಯ ಶಕ್ತಿಯ ನನ್ನ ಪ್ರಶ್ನೆಯಾದ ವಾಸುದೇವ ನಾಡಿಗ್ ನನ್ನ ಪ್ರೀತಿಯ ಕವಿ ಉಸಿರ ಕಟ್ಟಿಗೆಗೆ ಆತ್ಮದ ಕಿಡಿ ಹೊತ್ತಿಸಿದಾತ. ಕಾವ್ಯ ಪ್ರಪಂಚದ ಕಣ್ಣ ಬಾವಿಗಳಿಂದ ಬೆಳಕ ಸೇದಿದಾತ ಈ ಗೆಳೆಯನ ಪ್ರತಿ ಸಂಕಲನವೂ ಒಂದೊಂದು ಕಾವ್ಯ ಸೌಧ. ದಾಕ್ಷಿಣ್ಯಕೆ ಬರೆಯದ ಸ್ವಾಭಿಮಾನಿ. ಸಂಕಟಕೆ ಸಸಿ ನೆಡುವ ಕಾವ್ಯ ಸಂಸ್ಕಾರಿ, ನಿತ್ಯ ಸಂಚಾರಿ. ಈತನನ್ನಾರೂ ಪರಿಚಯಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ ಈತ ನಮ್ಮೊಳಗಿನವ. ನಮ್ಮೆದೆಯ ಕವಿಯಾದವ ಇದಕ್ಕೊಂದು ಹೆಸರು ವಾಸುದೇವ ನಾಡಿಗ್ ಎಂದು ನೀವು ಬೇಕೆನ್ನುವುದಾದರೆ ಅದಕ್ಕೆ ನನ್ನ ತಕರಾರಿಲ್ಲ ನನಗೆ ಮಾತ್ರ ಈತ ‘ಕವಿತೆ’ ಅಷ್ಟೇ… ಎಂದು ಹೇಳುವ ಮೂಲಕ ಕವಿಯನ್ನು ಪರಿಚಯಿಸಿದ್ದು, ಮಾತ್ರವಲ್ಲ ಇಲ್ಲಿಯ ಕವಿತೆಗಳ ಸ್ವರೂಪಗಳನ್ನುಸೂಚ್ಯವಾಗಿ ತೋರಿದ್ದಾರೆ.
ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...
READ MORE