ಇಂದಿರಾ ನಾಡಿಗ್ ಅವರ ಮೊದಲ ಕೃತಿ ʼಅಮ್ಮ ಮತ್ತು ಆಂಬೊಡೆʼ ಕಥಾಸಂಕಲನ ಕಳೆದ ವರ್ಷ ಪ್ರಕಟವಾಗಿ ಓದುಗರಿಂದ ಮೆಚ್ಚುಗೆ ಗಳಿಸಿದೆ. ಸಾವಧಾನವಾಗಿ ಮತ್ತು ಆತ್ಮೀಯವಾಗಿ ಕಥೆ ಹೇಳುವ ಇವರ ಶೈಲಿ ಓದಿಸಿಕೊಂಡು ಹೋಗುತ್ತದೆ. ಈ ಕೃತಿಯು ತೀರಾ ಬಡತನದಲ್ಲಿ ಹುಟ್ಟಿ, ಕಷ್ಟಕೋಟಲೆಗಳ ನಡುವೆಯೇ ಎದೆಗುಂದದೆ ಬದುಕನ್ನು ಕಟ್ಟಿಕೊಳ್ಳಲು ಹವಣಿಸುವ ಗ್ರಾಮೀಣ ವ್ಯಕ್ತಿಯ ಚಿತ್ರಣ. ತನ್ನ ಜೀವನವಿಡೀ ಘೋರ ಸಂಕಟಗಳ ನಡುವೆಯೇ ಕಳೆದರೂ, ಮುಂದಿನ ಪೀಳಿಗೆಯ ಬದುಕು ನೆಮಮ್ದಿಯಾಗಿರುವಂತೆ ಮಾಡುವಲ್ಲಿ ಯಶಸ್ವಿಯಾದ ಪಾಪದ ಜೀವಿ, ಇಂತಹ ಸಾವಿರಾರು ಮೂಕ ರೋಧನಗಳಿಗೆ ಸಮಾಜದಲ್ಲಿ ದನಿಯಿಲ್ಲದಂತಾಗಿವೆ. ನಮ್ಮ ಪೂರ್ವಜರ ಬದುಕಿನ ಇನ್ನೊಂದು ಮುಖವನ್ನು ಕಟ್ಟಿಕೊಡುವ ಹೃದಯಂಗಮ ಕಾದಂಬರಿ ಇದು.
ಇಂದಿರಾ ನಾಡಿಗ್ ಅವರಿಗೆ ಪತ್ರಿಕೆಗಳಿಗೆ ಬರೆಯುವುದು ಹವ್ಯಾಸ. ಪೊನ್ನಾಥಪುರವೆಂಬ ಹಳ್ಳಿಯಲ್ಲಿ ಹುಟ್ಟಿ, ರೈತಾಪಿ ಬಡ ಕುಟುಂಬದ ಹಿನ್ನೆಲೆಯಲ್ಲಿ, ಅನೇಕ ಹೋರಾಟಗಳನ್ನು ನಡೆಇಸಿದ್ದಾರೆ. ನಂತರ ವಾರ್ತಾ ಇಲಾಖೆಯಲ್ಲಿ ದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೊದಲ ಕಥಾ ಸಂಕಲನ "ಅಮ್ಮ ಮತ್ತು ಆಂಬೊಡೆ" , ಎರಡನೇ ಕೃತಿ "ಬಲವಂತದ ಕರ್ಮ" ಕಾದಂಬರಿ . ...
READ MORE