ಬಗೆ

Author : ಸಬಿಹಾ ಭೂಮಿಗೌಡ

Pages 128

₹ 60.00




Year of Publication: 2000
Published by: ಲೋಹಿಯಾ ಜನ್ಮಶತಾಬ್ಡಿ ಪ್ರತಿಷ್ಠಾನ
Address: ಕಪ್ಪುಗಲ್ಲು ರಸ್ತೆ, ಬಳ್ಳಾರಿ

Synopsys

‘ಬಗೆ’ ಸಬಿಹಾ ಭೂಮಿಗೌಡ ಅವರ ಲೇಖನಗಳ ಸಂಗ್ರಹವಾಗಿದೆ. ದಕ್ಷಿಣ ಕನ್ನಡದ ಲೇಖಕಿಯರ ಸಾಹಿತ್ಯಕ್ಕಷ್ಟೇ ಸೀಮಿತವಾಗಿ ಇರುವ ವಿವಿಧ ವಿಚಾರಗೋಷ್ಠಿಗಳಲ್ಲಿ ಈಗಾಗಲೇ ಮಂಡಿಸಿರುವ ಪ್ರಬಂಧಗಳ ಸಂಕಲನ. ಅಲ್ಲಿನ ಮಹಿಳಾ ಸಾಹಿತ್ಯದ ನಿಲುವುಗಳನ್ನು ಅಧ್ಯಯನ ಮಾಡಿ ವಿಶ್ಲೇಷಣೆಯನ್ನು ತಮ್ಮ ತಾತ್ವಿಕ ನೆಲೆಯಲ್ಲಿ ಮಂಡಿಸಲಾಗಿದ್ದು ಆ ಬಗೆಗೆ ಒಂದು ಸ್ತೂಲ ಪರಿಚಯವನ್ನು ಮಾಡಿಕೊಡಲಾಗಿದೆ. ಸಂಪ್ರದಾಯದ ಸಂಕೋಲೆಯಿಂದ ಹೊರಬ೦ದು ಹೊಸ ವ್ಯವಸ್ಥೆಯೊಂದಿಗೆ ಸ್ಪಂದಿಸಿದ ಸಾಹಿತ್ಯದ ಬಗ್ಗೆ ವಿವರಗಳಿವೆ.

About the Author

ಸಬಿಹಾ ಭೂಮಿಗೌಡ
(04 July 1959)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು.  ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...

READ MORE

Related Books