ಬರಿಗಣ್ಣಿಗೆ ಸತ್ಯದಂತೆ ಕಾಣುವುದು ಅನೇಕ ಸಲ ಒಳಗಣ್ಣಿಗೆ ಸುಳ್ಳಾಗಿರುತ್ತದೆ. ಮತ್ತು ಸುಳ್ಳಿಗೆ ಸಾವಿರಾರು ಸತ್ಯದ ಮುಖವಾಡಗಳಿರುವ ಪ್ರೇಮದ ಕಥಾ ಹಂದರ ಈ ಕಾದಂಬರಿ.
ಹಿಮಾಚಲದ ಕುಲೂ ವ್ಯಾಲಿಯಲ್ಲಿ ನಡೆಯುವ ಪ್ರೇಮ, ದುರಂತ ಮತ್ತು ಅದೆಲ್ಲಕ್ಕಿಂತ ಮುಖ್ಯವಾದ ಮಾನವ ಸ್ವಭಾವಗಳ ಕೋಮಲತೆ ಮತ್ತು ಕಾಠಿಣ್ಯ ಓದುಗರ ಅಂತಃಕರಣವನ್ನು ಆರ್ದ್ರವನ್ನಾಗಿಸುತ್ತದೆ. ಈ ಕೃತಿ ಹನ್ನೆರಡಕ್ಕೂ ಹೆಚ್ಚು ಮುದ್ರಣ ಕಂಡಿದೆ. ಬಾ ನಲ್ಲೆ ಮಧುಚಂದ್ರಕೆ ಎಂಬ ಹೆಸರಿನಲ್ಲೇ ನಾಗತಿಹಳ್ಳಿ ಚಂದ್ರಶೇಖರ ಅವರ ನಿದೇರ್ಶನದಲ್ಲಿ ಚಲನಚಿತ್ರವಾಗಿ ಯಶಸ್ಸನ್ನು ಗಳಿಸಿದೆ.
ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...
READ MORE