ಹೊಸತು ಪತ್ರಿಕೆಯ ಪ್ರಾರಂಭದಿಂದ ಐದು ವರ್ಷಗಳ ಅರವತ್ತು ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಸಂಪಾದಕೀಯ ಸೇರಿದಂತೆ ವಿಷಯವಾರಾಗಿ ವಿಂಗಡಿಸಿ ಹದಿನೆಂಟು ಸಂಪುಟಗಳಲ್ಲಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನವಕರ್ನಾಟಕ ನೀಡಿದೆ.
ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ದಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿ ಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ, ವಿಚಾರ ಸಂಪತ್ತು, ತಿಳಿವು, ಪ್ರಚಲಿತ ವಿದ್ಯಮಾನ, ಬಾನಿಗೊಂದು ಕೈಪಿಡಿ, ಆಯ್ದ ಸಂಪಾದಕೀಯಗಳು, ಇದು ನಮ್ಮ ಕರ್ನಾಟಕ, ಸಾಹಿತ್ಯಸಂವಾದ, ಪರಿಮಳದ ಸುಗ್ಗಿ, ಕಥಾಕುಂಜ, ಬಂಧ-ಬಂಧುರ, ಇತಿಹಾಸದ ಪರಾಮರ್ಶೆ, ದರ್ಶನ-ಸಂದರ್ಶನ, ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ, ವೈದ್ಯಲೋಚನ, ಮಹಿಳಾ ಲೋಕ, ವಚನ ಸಾಹಿತ್ಯ, ಬಿಂಬ-ಪ್ರತಿಬಿಂಬ ಹಾಗೂ ಶಿಕ್ಷಣ ಮತ್ತು ಸಂಸ್ಕೃತಿ - ಇವೇ 'ಹೊಸತು ವಾಚಿಕೆ' ಮಾಲೆಯ ಹದಿನೆಂಟು ಸಂಪುಟಗಳು. ಆಸಕ್ತರಿಗೆ ಆಕರ ಗ್ರಂಥಗಳಾಗಿ ಉಪಯೋಗವಾಗಬಲ್ಲಂಥವು. ಪ್ರತಿಯೊಂದು ಸಂಪುಟದಲ್ಲಿ ಆಯಾಯ ಲೇಖನಗಳ ಲೇಖಕರ ಪರಿಚಯ ನೀಡಿರುವುದೂ ಸಹ ವಾಚಿಕೆಯ ಒಂದು ವೈಶಿಷ್ಟ್ಯ, 'ಆಯ್ದ ಸಂಪಾದಕೀಯಗಳು' ಸಂಪುಟವನ್ನು ಸಂಪಾದಿಸಿಕೊಟ್ಟವರು ಡಾ.ಎನ್. ಗಾಯತ್ರಿಯವರು. 'ಹೊಸತು' ಪತ್ರಿಕೆಯ ಸಂಪಾದಕ ಬಳಗದ ಸದಸ್ಯರಲ್ಲೊಬ್ಬರು. ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ರೂವಾರಿಯಾಗಿ 'ಅಚಲ' ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಹಿಳಾ ಚಳವಳಿಯ ಸಂಘಟಕರಾಗಿಯೂ ಖ್ಯಾತರಾಗಿದ್ದಾರೆ.
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...
READ MORE