ಲೇಖಕ ಗೀತಾ ವಸಂತ ಅವರ ಬರಹಗಳ ಸಂಗ್ರಹ ‘ಅವಳ ಅರಿವು’. ಕೃತಿಯ ಉಪಶೀರ್ಷಿಕೆಯಲ್ಲಿ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳು ಎಂಬುದಾಗಿ ನಮೂದಿಸಲಾಗಿದೆ. ಅರಿವೆಂಬುದು ಸಂಕಟ ಸಂಭ್ರಮ ಏಕಾಂತ ಲೋಕಾಂತಗಳೆಲ್ಲವೂ ಬೆಸೆದುಕೊಂಡದ್ದು. ಆದು ಈ ತೆಕ್ಕೆಗೆ ಸಿಕ್ಕಷ್ಟು ಆಕಾಶ. ಅದು ಅವಳ ಒಡಲಲ್ಲಿ ಮೊಳೆತಾಗ ಅವಳ ರಕ್ತ ಮಾಂಸಗಳನ್ನೇ ತೊಟ್ಟು ಆಕಾರ ತಾಳುತ್ತದೆ. ಅದು ಅವಳ ಮೈಯ ಅರಿವು ...ಮನದ ಅರಿವು ..ಪ್ರಜ್ಞೆಯ ಸಂಗೀತ ಎಂಬುದಾಗಿ ಕೃತಿಯ ಬಗ್ಗೆ ಲೇಖಕಿ ಹೇಳಿಕೊಂಡಿದ್ದಾರೆ.
ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ...
READ MORE