ಲೇಖಕ ಶರಣಬಸಪ್ಪ ವಡ್ಡನಕೇರಿ ಅವರ ಕೃತಿ-ಅಪರೂಪದ ಸಂಗತಿಗಳು. ಇಂದು ಜಗತ್ತು ಬದಲಾವಣೆ ಹೊಂದುತ್ತಿದ್ದು,ಬದಲಾವಣೆಗೆ ತಕ್ಕಂತೆ ಬದಲಾಗುವುದು ಅನಿವಾರ್ಯ. ಅಜ್ಜ ಹಾಕಿದ ಆಲದ ಮರ ಎಂಬಂತೆ ಹಳೆ ಸಂಸ್ಕೃತಿಗೆ ಕಟ್ಟುಬಿದ್ದು ಹಳೆ ವಿಷಯಗಳನ್ನು ತಿಳಿದುಕೊಳ್ಳುವುದು ಇಂದಿನ ದಿನಮಾನಕ್ಕೆ ಒಗ್ಗುವುದಿಲ್ಲ. ತೀವ್ರತೆರನಾದ ರೀತಿಯಲ್ಲಿ ಜಗತ್ತು ಬದಲಾಗುತ್ತಿದ್ದು, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ.ಅದಕ್ಕೆ ಪೂರಕವಾದಂತೆ ಗೊತ್ತಿರದ ಎಷ್ಟೋ ವಿಷಯಗಳು ನಮ್ಮ ಮುಂದೆ ಅದರಲ್ಲೂ ವಿದ್ಯಾರ್ಥಿ ಸಮುದಾಯದ ಮುಂದೆ ಇದ್ದು. ಅದನ್ನು ಮನಗಂಡು ವಿಶಿಷ್ಟ ವಿಷಯಗಳನ್ನು ಒಂದೆಡೆ ಸಂಗ್ರಹಿಸಿದ್ದೇ ಈ ಕೃತಿ.
ಅಮೆರಿಕ ಅಕ್ಕ ಸಮ್ಮೇಳನ ಕುರಿತು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂತ ಆಗಿದ್ದು ಯಾವಾಗ, ಮೋಟಾರ್ ಸೈಕಲ್ ಗಳು ನಡೆದುಬಂದ ದಾರಿ, ಹನ್ನೆರಡು ರಾಷ್ಟ್ರಗಳಿಗೆ ಈಗ ಒಂದೇ ಯುರೋ, ಬಾವುಟದ ಹಿನ್ನೆಲೆ, ಅಕಾಡೆಮಿ ಎಂದರೇನು,ವಿಕ್ರಮಶಕೆ, ಶಕವರ್ಷ, ನಿಘಂಟು ಎಂದರೆ, ಅಶ್ವಮೇಧಯಾಗ ಎಂದರೆ, ಪುರಾಣ ಕಥೆಗಳಲ್ಲಿ ಚಂದ್ರ, ಪ್ರಕೃತಿ ಮಾನವ ಮತ್ತು ಜ್ಯೋತಿಷ್ಯ,ಮೊಟ್ಟೆ ಶಾಸನಗಳಿವೆ ಅಂತೆ, ಹೀಗೆ ಹಲವಾರು ಸಂಗತಿಗಳ ಬಗ್ಗೆ ತಿಳಿಸಿದ್ದು ಈ ಕೃತಿಯ ವೈಶಿಷ್ಟ್ಯ.
ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...
READ MORE