ಬಾಲ್ಯದ ನೆನಪು-ಹರೆಯದ ಹುರುಪು, ಅಮ್ಮನ ಅಕ್ಕರೆ, ಪ್ರೇಯಸಿಯ ದೆಸೆಯಲ್ಲಿ ಖಾಲಿಯಾದ ಕಿಸೆ, ಅಪ್ಪನ ಕಾಳಜಿಯಲ್ಲಿ ಮಿಂದೆದ್ದ ಅನುಭವದ ಪದ್ಯಗಳು ಇಲ್ಲಿವೆ. ತಮ್ಮ ಅನುಭವದ ಸಾರದಲ್ಲಿ ಕಂಡ ವಿಶೇಷತೆಗಳು, ಬಹುತೇಕರ ಅರಿವಿಗೆ ಬಾರದವುಗಳನ್ನು ಕವಿ ವಾಸುದೇವ ನಾಡಿಗ್ ಅಕ್ಷರ ರೂಪ ನೀಡಿದ್ದಾರೆ. ಅವರ ಈವರೆಗಿನ ಐದು ಕವನಗಳ ಸಂಗ್ರಹ ಈ ಕೃತಿ.
ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...
READ MORE