ಕವಿ ಲಕುಮಿಕಂದ ಮುಕುಂದ (ರವಿಕಿರಣ ಗೌ. ಪಾಟೀಲ) ಅವರ ಕವನಗಳ ಸಂಕಲನ. ಒಟ್ಟು 51 ಕವಿತೆಗಳಿವೆ. ಸವದತ್ತಿಯ ಸಾಹಿತಿ ವಾಯ್. ಎಮ್. ಯಾಕೊಳ್ಳಿ ಅವರು ಕೃತಿಗೆ ಮುನ್ನುಡಿ ಬರೆದು ‘ಬಹುತೇಕ ಕವಿತೆಗಳು ಪ್ರೇಮದ, ನೋವಿನ, ವಿರಹದ ಫಲಕುಗಳೇ ಆಗಿವೆ. ಕೆರಳದ ಕನ್ಯೆಯೂ ಆಗಿದ್ದಾಳೆ. ಕವಿತೆಗಳಲ್ಲಿ ವ್ಯವಸ್ಥೆಯ ವಿರುದ್ಧ ಸಿಟ್ಟಿದೆ. ತಮ್ಮೂರು, ನಾಡಿನ ಕುರಿತು ಅಭಿಮಾನ ಇರಿಸಿಕೊಂಡು ಬರೆಯುವುದು ಇಲ್ಲಿಯ ಕವಿತೆಗಳ ಧನಾತ್ಮಕ ಅಂಶಗಳಾಗಿವೆ. ಕವಿಯು ಹಳ್ಳಿಯ ನೋವು-ನಲಿವು ಬೆಳೆದಿದ್ದಾದ್ದರಿಂದ ಸಾಂತ್ವನದ ಸ್ಥಿತಿಯಿಂದ ಕವಿತೆ ಕಟ್ಟ ಹೊರಟಿದ್ದಾರೆ’ ಎಂದು ಪ್ರಶಂಸಿಸಿದ್ದರೆ, ಚುಟುಕು ಸಾಹಿತ್ಯ ಪರಿಷತ್ ರಾಮದುರ್ಗ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ್, ‘ವಿಭಿನ್ನ ವಸ್ತು ವೈವಿಧ್ಯತೆಯ ಕವಿತೆಗಳಿವೆ. ಪ್ರಕೃತಿ, ರೈತ, ಬಾಳು, ಸಮಾಜದ ಬಗ್ಗೆ ಪ್ರೀತಿ ಇದೆ. ಅನ್ಯಾಯ ವಿರುದ್ಧದ ಪ್ರತಿಭಟನೆಯ ಧ್ವನಿ ಇದೆ. ದುರ್ಬಲರಿಗೆ ಊರುಗೋಲಾಗುವ ಕವಿತೆಗಳಿವೆ. ಅನೇಕ ತಲ್ಲಣಗಳಿಗೆ ಪರಿಹಾರಗಳಿವೆ’ ಎಂದು ಶ್ಲಾಘಿಸಿದ್ದಾರೆ.
ಲೇಖಕ ರವಿಕಿರಣ ಪಾಟೀಲ (ಮುದಿಗೌಡ್ರ) ಅವರ ಕಾವ್ಯನಾಮ ಲಕುಮಿಕಂದ ಮುಕುಂದ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದವರು. ಎಂ.ಎ. ಬಿ.ಇಡಿ ಪದವೀಧರರು. ಗಜಲ್, ಮಿನಿಕಥೆ, ಕವಿತೆ, ಚಿತ್ರಕವಿತೆ, ರುಬಾಯಿ, ಹಾಯ್ಕು, ಚುಟುಕು, ವಚನಗಳು, ಏಕಾಂಕ, ನಾಟಕಗಳ ರಚನೆ ಇವರ ಹವ್ಯಾಸ. ಕೃತಿಗಳು: ಅಂತರಂಗದ ಗಂಗೆ (ಕವನ ಸಂಕಲನ). ...
READ MORE