ANSWERING THE UNANSWERED

Author : ಪ್ರವೀಣಾ ಕುಲಕರ್ಣಿ

Pages 136

₹ 160.00




Year of Publication: 2024
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

“ANSWERING THE UNANSWERED” ಮೂಲ ಇಂಗ್ಲೀಷಿನಲ್ಲಿದ್ದ ಈ ಕೃತಿಯನ್ನು ಪ್ರವೀಣಾ ಕುಲಕರ್ಣಿ ಅವರು ಕನ್ನಡೀಕರಿಸಿದ್ದಾರೆ. ಆಟಿಸಂ ಇರುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಕುರಿತಾಗಿ ಹುಡುಕುತ್ತಿದ್ದ ಅನೇಕ ಪ್ರಶ್ನೆಗಳಿಗೆ ಪ್ರಶ್ನೋತ್ತರದ ಮಾದರಿಯಲ್ಲಿರುವ ಈ ಪುಸ್ತಕವು ಉತ್ತರ ನೀಡುತ್ತದೆ. ನವನೀತ್ ಕುಲಕರ್ಣಿ ಅವರ ಒಳನೋಟಗಳು ಆಟಿಸಂ ಬಗೆಗಿನ ಅನೇಕ ಅನುಮಾನಗಳಿಗೆ, ಪ್ರಶ್ನೆಗಳಿಗಷ್ಟೇ ಅಲ್ಲದೆ, ಪೋಷಕರಿಗೆ ತಮ್ಮ ಮಕ್ಕಳನ್ನು ಇನ್ನಷ್ಟು ಹತ್ತಿರದಿಂದ ಅರಿಯಲು ಸಹಾಯ ಮಾಡುತ್ತದೆ. ಆತ್ಮೀಯ ಸ್ನೇಹಿತರೊಬ್ಬರು ಸಮಸ್ಯೆಗಳಿಗೆ ಸಲಹೆ ನೀಡುವಂತಿರುತ್ತದೆ ನವನೀತರ ಉತ್ತರಗಳು. ತಮ್ಮ ಅನುಭವಗಳ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ನವನೀತರ ಶೈಲಿ ವಿಶೇಷವಾದದ್ದು. ಪೋಷಕರಿಗೆ ತಮ್ಮ ಮಕ್ಕಳನ್ನು ಸೂಕ್ತವಾಗಿ ನಿಭಾಯಿಸಲು ತಮ್ಮ ಒಳನೋಟದ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರುವ ಲೇಖಕರ ಜ್ಞಾನ ಅಗಾಧವಾದದ್ದು. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು 2020ರ ಆತ್ಮನಿರ್ಭರ ಭಾರತ ಅಭಿಯಾನ “ಮಿಷನ್ ಓನ್ಲಿ ಕೆಪೇಬಿಲಿಟಿ" ಕಾರ್ಯಕ್ರಮಕ್ಕೆ ಅಂಬಾಸಿಡರ್ ಆಗಿದ್ದಾರೆ. ಆರ್ಟ್ ಆಫ್ ಆಟಿಸಂ ಸಂಸ್ಥೆಯ ಶಾಂತಿ ಕಾರ್ಯಕ್ರಮದ ಕಲೆ/ಸಾಹಿತ್ಯ ವಿಭಾಗದಲ್ಲಿ ಇವರ ಕವನಗಳು ಪ್ರಕಟವಾಗಿವೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ನವನೀತ್ ಅವರು ತಮ್ಮನ್ನು ಗುರುತಿಸಿಕೊಳ್ಳುತ್ತ ಇತರರಿಗೆ ಮಾದರಿಯಾಗಿ ಸಾಗುತ್ತಿದ್ದಾರೆ.

About the Author

ಪ್ರವೀಣಾ ಕುಲಕರ್ಣಿ

ಪ್ರವೀಣಾ  ಕುಲಕರ್ಣಿ ಅವರದ್ದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವ. ಕಲೆ, ಸಾಹಿತ್ಯ, ಸಂಗೀತ, ನಾಟಕ, ಕ್ರೀಡೆ, ಕಿರುತೆರೆ, ಚಿತ್ರರಂಗ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ‘ಪರ್ವಿಕ್ ಕನ್ಸಲ್ಟೆಂಟ್ಸ್’ ಸಂಸ್ಥೆಯನ್ನು ಹುಟ್ಟುಹಾಕಿ ಹಲವಾರು ಕ್ರಿಯಾತ್ಮಕ, ಸಂಘಟನಾತ್ಮಕ, ಕೌಶಲ್ಯವರ್ಧಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಬೆಂಗಳೂರು ಆಕಾಶವಾಣಿಗೂ ಧ್ವನಿಯಾಗಿದ್ದು, ಡಿಜಿಟಲ್ ರೇಡಿಯೋದ 'ಜವಾರಿ ಮಾತು' ಕಾರ್ಯಕ್ರಮದಿಂದ ರೇಡಿಯೋ ಜಾಕಿ ಎಂದೆನಿಸಿಕೊಂಡಿದ್ದಾರೆ. ದೂರದರ್ಶನದ ಹಲವಾರು ವಾಹಿನಿಗಳಲ್ಲಿ ನಿರೂಪಕರಾಗಿ, ಸಂದರ್ಶಕರಾಗಿ ಕಾಣಿಸಿಕೊಂಡಿರುವ ಪ್ರವೀಣಾ ಕುಲಕರ್ಣಿ ಚಂದನ ವಾಹಿನಿಯ ‘ಆಹಾ ಎಂಥಾ ರುಚಿ’ ಕಾರ್ಯಕ್ರಮದಿಂದ ಕನ್ನಡಿಗರ ಮನೆಮಾತಾಗಿದ್ದಾರೆ. ಯಶಸ್ವಿ ನಿರೂಪಕಿಯಾಗಿ, ಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರು ...

READ MORE

Related Books