ನಟ ಸಂಚಾರಿ ವಿಜಯ್ ಅವರ ಜೀವನ ಸಾಧನೆ ಕುರಿತ ಬರಹಗಳನ್ನು ಸಂಗ್ರಹಿಸಿ, ಸಂಪಾದಿಸಿದ ಲೇಖಕ ಶರಣು ಹುಲ್ಲೂರು ಅವರ ಕೃತಿ-ಅನಂತವಾಗಿರು. ತಮ್ಮ ಆಕರ್ಷಣೀಯ ಹಾಗೂ ಕಲಾತ್ಮಕ ನಟನೆಯಿಂದ ಕನ್ನಡ ಚಲನಚಿತ್ರ ರಂಗದ ಪ್ರೇಕ್ಷಕರ ಗಮನ ಸೆಳೆದಿದ್ದ ಸಂಚಾರಿ ವಿಜಯ್, ರಾಷ್ಟ್ರಪ್ರಶಸ್ತಿ ಪುರಸ್ಕೃತರು. ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದ ಅಲ್ಪ ಕಾಲಾವಧಿಯಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ ಅವರು, ಕನ್ನಡ ಚಲನಚಿತ್ರ ರಂಗದ ಸಾಧ್ಯತೆಗಳ ವಿಸ್ತರಣೆಗೆ ಸಾಕಷ್ಟು ಕೊಡುಗೆ ನೀಡುವ ಭರವಸೆ ಇತ್ತು. ಆದರೆ, ರಸ್ತೆ ಅಪಘಾತವೊಂದರಲ್ಲಿ ಇತ್ತೀಚೆಗೆ ಮೃತಪಟ್ಟಿದ್ದರ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು, ಲೇಖಕರು ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ ನೀಡಿರುವ ಈ ಕೃತಿಯು, ಸಂಚಾರಿ ವಿಜಯ್ ಅವರ ಬದುಕಿನ ಸಾಧನೆಯ ಪಕ್ಷಿನೋಟ ನೀಡುತ್ತದೆ. .
ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು, ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ...
READ MORE