ಅಮೃತಮತಿ ಸ್ವಗತ

Author : ಎಚ್.ಎಲ್. ಪುಷ್ಪ

Pages 80

₹ 70.00




Year of Publication: 2020
Published by: ಕಿರಂ ಪ್ರಕಾಶನ
Address: ನಂ. 173, 7ನೇ ಮುಖ್ಯರಸ್ತೆ, 24ನೇ 'ಸಿ' ಕ್ರಾಸ್ ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಬೆಂಗಳೂರು - 560 079
Phone: 9480051222

Synopsys

ಎಚ್‌. ಎಲ್‌. ಪುಪ್ಪ ಅವರ ‘ಅಮೃತಮತಿ ಸ್ವಗತ’ ಕೃತಿ ಸಾಕಷ್ಟು ಚರ್ಚಿತವಾಗಿದ್ದು ಹಲವಾರು ವಿಶ್ವ ವಿದ್ಯಾಲಯಗಳ  ಪದವಿ ವಿದ್ಯಾರ್ಥಿಗಳಿಗೆ ಈ ಕೃತಿಯು ಪಠ್ಯವಾಗಿದೆ. ಜನ್ನನ ಯಶೋಧರ ಚರಿತೆಯನ್ನು ಮೂಲವಾಗಿಟ್ಟುಕೊಂಡು ಬರೆದ ಕವನ ಸಂಕಲನ ಅಮೃತಮತಿಯ ಸ್ವಗತ. ಈ  ಕೃತಿಯು ಸ್ತ್ರೀ ಅಸ್ತಿತ್ವ ಕುರಿತು ಹಲವಾರು ಚಿಂತನೆಗಳನ್ನು ಮುಂದಿಡುತ್ತದೆ. ಸ್ತ್ರೀ ಅಸ್ತಿತ್ವದ, ಸಂವೇದನೆಯ ಬದುಕಿನ ಸಾಂಗತ್ಯಕ್ಕೆ ಮತ್ತೊಂದು ರೂಪವನ್ನು ಕವಯತ್ರಿ ನೀಡಿದ್ದಾರೆ.

About the Author

ಎಚ್.ಎಲ್. ಪುಷ್ಪ
(18 September 1962)

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.  ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...

READ MORE

Related Books