ಅಂಬೇಡ್ಕರ್‌ ಮತ್ತು ದಲಿತ ರಾಜಕಾರಣ

Author : ನಾ. ದಿವಾಕರ

Pages 352

₹ 320.00




Year of Publication: 2021
Published by: ಶಾರದಾ ಪ್ರಕಾಶನ
Address: #486, 14ನೇ ಮುಖ್ಯ ರಸ್ತೆ, ಕುಕ್ಕರಹಳ್ಳಿ ಕೆರೆ, ಸರ್ಕಾರಿ ಶಾಲೆಯ ಹಿಂದೆ, ಸರಸ್ವತಿಪುರಂ ಮೈಸೂರು-570009.

Synopsys

ʼಅಂಬೇಡ್ಕರ್‌ ಮತ್ತು ದಲಿತ ರಾಜಕಾರಣʼ ಲೇಖನ ಸಂಗ್ರಹ ಪುಸ್ತಕವನ್ನು ಲೇಖಕ ನಾ. ದಿವಾಕರ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿರುವ ಬರಹಗಳು ಕೆಲವು ವರ್ಷಗಳ ವಿದ್ಯಾಮಾನಗಳನ್ನು ಆಧರಿಸಿದ, ಸೈದ್ಧಾಂತಿಕ ಒಳನೋಟಗಳನ್ನು ಕಟ್ಟಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ. ದಲಿತಪರ ಹೋರಾಟಗಳ ವಿವರಣೆ, ವಿಶ್ಲೇಷನೆ ಮತ್ತು ಪ್ರತಿಪಾದನೆಗಳಿಗೆ ಸಹಜ ಆದ್ಯತೆ ಲಭ್ಯವಾಗಿದೆ.ಅಂಬೇಡ್ಕರ್‌ ಅವರ ಆಶಯ ಮತ್ತು ದಲಿತ ರಾಜಕಾರಣದ ವಾಸ್ತವಗಳ ನಡುವೆ ಅನುಸಂಧಾನ ನಡೆಸಲಾಗಿದೆ. ಪ್ರಬುದ್ಧ ಚರ್ಚೆಗೆ ಪ್ರೇರಕವಾಗುವ ಅನೇಕ ಹೇಳಿಕೆಗಳನ್ನು ದಿವಾಕರ ಅವರು ತಮ್ಮ ಬರಹಗಳ ವ್ಯಾಪ್ತಿಯಲ್ಲಿ ನೀಡಿದ್ದಾರೆ. ದಲಿತ ಹೋರಾಟ ಒಳಗೊಂಡಂತೆ ಸಾಮಾಜಿಕ ಆರ್ಥಿಕ ಹೋರಾಟಗಳನ್ನು ಒಟ್ಟಿಗೇ ದೊಡ್ಡ ಮಟ್ಟದಲ್ಲಿ ಕಟ್ಟಿಕೊಟ್ಟಿರುವ ಈ ಕೃತಿಗೆ ಸಾಕಷ್ಟು ಮಹತ್ವವಿದೆ ಎಂದು ಮುನ್ನಡಿಯಲ್ಲಿ ಲೇಖಕ ಬರಗೂರು ರಾಮಚಂದ್ರಪ್ಪ ಹೇಳುತ್ತಾರೆ. ಒಮ್ಮೆ ಅಭಿಪ್ರಾಯಾತ್ಮಕವಾಗಿಯೂ, ಇನ್ನೊಮ್ಮೆ ಅಧ್ಯಯನಾತ್ಮಕವಾಗಿಯೂ ವಿಬಿನ್ನ ಆಯಾಮಗಳ ಈ ಕೃತಿಯು ಒಳಗೊಂಡಿದ್ದು ಗಂಭೀರ ಚರ್ಚೆಗೆ ಒತ್ತಾಸೆ ಒದಗಿಸುತ್ತದೆ. ನಾ ದಿವಾಕರ ಅವರು ಸಾಮಾಜಿಕ ಕಳಕಳಿಯ ಹಿನ್ನಲೆಯಲ್ಲಿ ಈ ಕೃತಿಯನ್ನು ರಚಿಸಿದ್ದಾರೆ.ವಿಶ್ಲೇಷನಾತ್ಮಕ ಲೇಖನ, ಜಾತಿ, ವರ್ಗ ಪ್ರಜ್ಞೆ, ದಲಿತ ಹೋರಾಟ, ಮಾರ್ಕ್ಸ್ವಾದಿ ಸಿದ್ಧಾಂತ ಮುಂತಾದ ಅಂಶಗಳನ್ನು ಒಟ್ಟಿಗೆ ಇಟ್ಟು ವಿಶ್ಲೇಷಿಸುವ ಈ ಲೇಖನವು ಚಿಂತನೆಗೆ ಹಚ್ಚುತ್ತದೆ.

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books