ಲೇಖಕ ಧನ್ಯಕುಮಾರ ಇಜಾರಿ ಅವರ ವ್ಯದ್ಯಕೀಯ ವಿಷಯಕ್ಕೆ ಸಂಬಂಧಪಟ್ಟ ಲೇಖನ ಕೃತಿ ʼಅಲೋಪಥಿ ವೈದ್ಯ ಮಾರ್ಗದರ್ಶಿʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ವೃತ್ತಿಪರ ವೈದ್ಯರ ಹಿತಾಸಕ್ತಿನ್ನಿಟ್ಟುಕೊಂಡು ಪಠ್ಯದಂತೆ ವಿವರಣೆ ಕೊಡದೆ, ರೋಗ ಪತ್ತೆಹಚ್ಚುವಲ್ಲಿ, ಚಿಕಿತ್ಸೆ ಹಾಗು ಮುಂಜಾಗ್ರತೆಗಳ ವಿಷಯಗಳಲ್ಲಿ ಸಾಕಷ್ಟು ಅನುಭವಗಳನ್ನು ಹೇಳಿದ್ದೇನೆ. ಅಲ್ಲಲ್ಲಿ ವಿವಿಧ ಚಿಕಿತ್ಸೆಗಳ ಮುಖ್ಯವಾಗಿ ಆಯುರ್ವೇದದ ಬಗೆಗೆ ಹೇಳಿದ್ದರೂ ಚಿಕಿತ್ಸಾ ತತ್ವದಲ್ಲಿ ಭಿನ್ನಮತವಿರುವುದರಿಂದ ಅಲೋಪಥಿಯನ್ನೇ ಈ ಗ್ರಂಥವು ವಿಶೇಷವಾಗಿ ಆಧರಿಸಿದೆ. ನಿರೀಕ್ಷಿಸಿದಂತೆ ಅಲೋಪಥಿ ವೈದ್ಯ ಮಾರ್ಗದರ್ಶಿ ಎರಡನೇ ಆವೃತ್ತಿಗೆ ಬಂದಿದೆ. ಗ್ರಾಮೀಣ ಪ ದೇಶಗಳಲ್ಲಿ ವೈದ್ಯ ವೃತ್ತಿನಿರತರಿಗೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಪುಸ್ತಕವು ತುಂಬ ಉಪಯುಕ್ತವೆನಿಸಿದೆ. ಎರಡನೆ ಆವೃತ್ತಿಯಲ್ಲಿ ಅನೇಕ ಹೊಸ ವಿಷಯಗಳನ್ನು ಸೇರ್ಪಡೆ ಮಾಡಿದ್ದೇನೆ. ಏಡ್ಸ್, ಹೆಪಾಟೈಟಿಸ್- ಬಿ, ವಿವಿಧ ಕ್ಯಾನ್ಸರ್ ರೋಗಗಳು, ಸ್ತ್ರೀರೋಗಗಳನ್ನು ಹಾಗು ಹೊಸ ಸಂಶೋಧನೆಗಳು, ಔಷಧಿ- ವಿಚಾರಗಳನ್ನು ಸೇರಿಸಿದ್ದೇನೆ. ಇದರಿಂದ ವೈದ್ಯರಿಗೆ ಇನ್ನಷ್ಟು ಪ್ರಯೋಜನಕಾರಿಯಾಗುವುದು ಎಂದು ನಂಬಿದ್ದೇನೆ”.