ಲೇಖಕಿ ಸಂಧ್ಯಾ ಶರ್ಮ ವೈ.ಕೆ ಅವರ ಕಾದಂಬರಿ ಅಗ್ನಿಚುಂಬನ . ಅವರು ಹೇಳುವಂತೆ, ಹದಿಹರೆಯದ, ಹೆಂಗಳೆಯರ ಮನಸೆಳೆವ ಕಾದಂಬರಿ ಪ್ರಕಾರ ಇಂದು ಜನಪ್ರಿಯ ಸಾಹಿತ್ಯ ಎಂಬ ಹಣೆಪಟ್ಟಿಯನ್ನು ಧರಿಸಿದೆ. ಮೌಲಿಕ ಸಾಹಿತ್ಯವೆಲ್ಲವೂ ಜನಸಾಮಾನ್ಯರನ್ನು ಮುಟ್ಟುತ್ತದೆ ಎಂದು ಹೇಳಲಾಗದು, ಓದುವ ಅಭಿರುಚಿಯನ್ನು ಬೆಳೆಸುವ, ಜೊತೆಜೊತೆಗೆ ಮನರಂಜನೆಯನ್ನು ಹಾಗೂ ಒಂದು ಹೊಸ ವಿಚಾರವನ್ನು ಕಥಾರೂಪದಲ್ಲಿ ಹೇಳುವ ಕಾದಂಬರಿ ರಚನೆಗೆ-ಓದಿಗೆ ಇಂದು ತುಂಬಾ ಬೇಡಿಕೆ ಇದೆ. ಅದರಂತೆ ಪತ್ರಿಕೆಗಳು ಹಾಗೂ ಓದುಗರನ್ನು ಗಮನದಲ್ಲಿಟ್ಟುಕೊಂಡು ನಾನು ಅನೇಕ ಕಾದಂಬರಿಗಳನ್ನು ಬರೆದಿದ್ದೇನೆ. ಈ ಸಾಲಿಗೆ ಹೊಸ ಸೇರ್ಪಡೆ ಈ ಈ ಕಥೆ-ನಿರೂಪಣಾ ಶೈಲಿ ನಿಮಗೆ ಹಿಡಿಸಬಹುದೆಂದು ಭಾವಿಸಿದ್ದೇನೆ ಎಂದಿದ್ದಾರೆ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE