‘ಆಧ್ಯಾತ್ಮದ ಮಧ್ಯೆ ಬಿಡುವು' ಓಶೋರ ಸಾಮಾಜಿಕ ರಾಜಕೀಯ ಚಿಂತನೆಗಳು ಕೃತಿಯು ಟಿ.ಎನ್. ವಾಸುದೇವಮೂರ್ತಿ ಅವರ ಪರಿಷ್ಕೃತ ಆವೃತ್ತಿಯಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ; ಈವರೆಗಿನ ಎಲ್ಲ ಧರ್ಮಗಳೂ ಸರ್ವಾಧಿಕಾರೀ, ಮೂಲಭೂತವಾದೀ, ಫ್ಯಾಸಿಸ್ಟ್ ಧರ್ಮಗಳಾಗಿದ್ದವು. ಮೈತ್ರೇಯ ಬುದ್ದನಿಂದ ಆಧ್ಯಾತ್ಮಿಕ ವಲಯದಲ್ಲೂ ಪ್ರಜಾಪ್ರಭುತ್ವದ ಮೌಲ್ಯ ನೆಲೆಯೂರಿತು. ಮೈತ್ರೇಯ ಎಂದರೆ ಗೆಳೆಯ ಎಂದರ್ಥ. ಕೆಲವು ಸಲ ಬದುಕಿನ ಸಣ್ಣಪುಟ್ಟ ಸಂಗತಿಗಳಿಂದಲೂ ಶಬ್ದಗಳು ಎಷ್ಟು ಖಾಲಿ ಎಂದು ತಿಳಿದುಬಿಡುತ್ತದೆ. ಶಬ್ದಗಳ ಖಾಲಿತನವನ್ನು ಮನಗಾಣದವನು ತೀವ್ರವಾಗಿ ಬದುಕುವ ವ್ಯಕ್ತಿಯೇ ಅಲ್ಲ ಎಂದು ನನ್ನ ತಿಳುವಳಿಕೆ. ನಮ್ಮ ಬದುಕನ್ನೆಲ್ಲ ಶಬ್ದಗಳಲ್ಲಿ ಹೇಳಿ ಮುಗಿಸಬಹುದಾದರೆ ನಾವು ಸರಿಯಾಗಿ ಬದುಕಲೇ ಇಲ್ಲ ಎಂದರ್ಥ. ಸಾವಿನ ಅನುಭವ ಒಬ್ಬ ವ್ಯಕ್ತಿಯಲ್ಲಿ ಆಳಕ್ಕೆ ಇಳಿದುಬಿಟ್ಟರೆ ಮೈತ್ರಿ ಮಮಕಾರಗಳು ಅವನಲ್ಲಿ ಮತ್ತೆ ತಲೆಯೆತ್ತಲಾರವು. ಅಂದರೆ ಮಮಕಾರ ಹುಟ್ಟಲು ಗಹನವಾದ ಸತ್ಯಗಳ ವಿಸ್ಮತಿ ಅತ್ಯಗತ್ಯ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್ ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...
READ MORE