‘ಆಧುನಿಕ ಕರ್ನಾಟಕದ ಆಂದೋಲನಗಳು’ ಎಸ್.ಚಂದ್ರಶೇಖರ್ ಅವರ ಲೇಖನಗಳ ಸಂಗ್ರಹವಾಗಿದೆ. ಹಲವು ರಾಜವಂಶಗಳು ಆಳಿ ಮೆರೆದ ಕನ್ನಡ ನಾಡಿನ ಚರಿತ್ರೆ ಯನ್ನು ಒಂದು ಸೂತ್ರಕ್ಕೆ ಒಳಪಡಿಸುವುದು ಸ್ವಲ್ಪ ಕಠಿಣವೇ. ಇವುಗಳ ಮಧ್ಯೆ ಜನರಿಂದ - ಜನರಿಗಾಗಿ ರೂಪುಗೊಂಡ ಸಂಘರ್ಷಗಳ ರೂಪ ರೇಷೆಗಳನ್ನು ಪೂರ್ವಗ್ರಹವಿಲ್ಲದೆ ನಿರೂಪಿಸಲಾಗಿದೆ.
ಲೇಖಕ ಚಂದ್ರಶೇಖರ ಎಸ್.ಅಂತರ, ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ʼಅಂತರʼ ನಿವಾಸಿ. ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ (ಪತ್ರಿಕೋದ್ಯಮ) ಪದವೀಧರರು. ಸಮಾಜದ ಸಮಸ್ಯೆಗಳು-ಪರಿಹಾರ ಕುರಿತ ಲೇಖನಗಳು, ಸಂದರ್ಶನ, ಉದಯೋನ್ಮುಖ ಪ್ರತಿಭೆಗಳ, ಸಾಧಕರ ಪರಿಚಯಾತ್ಮಕ ಬರಹಗಳು ಪ್ರಕಟವಾಗಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದರು. ಸದ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾರವಾಗುತ್ತಿರುವ ʼಮಂಜುವಾಣಿʼ ಕನ್ನಡ ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕರು. ಕೃತಿಗಳು: ಸಾಧನೆಯ ಪಥದಲ್ಲಿ ಸುವರ್ಣ ಹೆಜ್ಜೆಗಳು (ಶ್ರೀ ವೀರೇಂದ್ರ ಹೆಗ್ಗಡೆ ಅವರ ಸಾಧನೆಗಳ ಕುರಿತ ಕೃತಿ) ...
READ MOREಹೊಸತು-2002- ಅಕ್ಟೋಬರ್
ಆಧುನಿಕ ಕರ್ನಾಟಕದ ಸುಮಾರು ೧೨೦ ವರ್ಷಗಳಿಂದೀಚೆಗಿನ ವಿವಿಧ ಚಳುವಳಿಗಳ ಮತ್ತು ಜನಾಂದೋಲನಗಳ ಸ್ವರೂಪವನ್ನು ಇಲ್ಲಿ ತೆರೆದಿಡಲಾಗಿದೆ. ಚರಿತ್ರೆಯನ್ನು ವಿವಿಧ ಕಾಲಘಟ್ಟಗಳಲ್ಲಿ ವಿವಿಧ ನೆಲೆಯಲ್ಲಿ ನಿಂತು ನೋಡಿದ ಪರಿಣಾಮದಿಂದ ಏಕತೆಗೆ ಅಲ್ಲಲ್ಲಿ ಧಕ್ಕೆ ಬಂದಿರುವುದುಂಟು. ಹಲವು ರಾಜವಂಶಗಳು ಆಳಿ ಮೆರೆದ ಕನ್ನಡ ನಾಡಿನ ಚರಿತ್ರೆಯನ್ನು ಒಂದು ಸೂತ್ರಕ್ಕೆ ಒಳಪಡಿಸುವುದು ಸ್ವಲ್ಪ ಕಠಿಣವೇ. ಇವುಗಳ ಮಧ್ಯೆ ಜನರಿಂದ - ಜನರಿಗಾಗಿ ರೂಪುಗೊಂಡ ಸಂಘರ್ಷಗಳ ರೂಪು ರೇಷೆಗಳನ್ನು ಪೂರ್ವಗ್ರಹವಿಲ್ಲದೆ ನಿರೂಪಿಸಲಾಗಿದೆ.