ಲೇಖಕ ಸಂತೋಷಕುಮಾರ ಮೆಹೆಂದಳೆ ಅವರ ‘ಅಬೋಟ್ಟಾಬಾದ್’ ಕೃತಿಯು ತಾಲಿಬಾನ್ - ಮುಜಾಹಿದ್ದಿನ್ - ಐಸಿಸ್ ಇತ್ಯಾದಿ ಹುಟ್ಟಿನ ಮೂಲ ಅದರ ಹಿಂದಿರುವ ಶಕ್ತಿ - ಇದ್ದಕ್ಕಿದ್ದಂತೆ ಬದಲಾದ ಅಂತಾರಾಷ್ಟ್ರೀಯ ರಾಜಕಾರಣ, ಆದರ ಹಿಂದಿನ ತಂತ್ರಗಾರಿಕೆ ಮತ್ತು ಕಳೆದ ನಾಲ್ಕು ದಶಕಗಳಿಂದ ಒಳಗೊಳಗೆ ಬೆಳೆದು ನಿಂತ ಉಗ್ರ ಪ್ರಪಂಚದ ಸಮಗ್ರ ಕಥಾನಕವಾಗಿದೆ. ಒಂದು ನೈಜ ಭಯೋತ್ಪಾದಕರ ಇತಿಹಾಸ ಮತ್ತು ವರ್ತಮಾನದ ಮೇಲೆ ಬೆಳಕು ಚೆಲ್ಲುವ ಕೃತಿ. ಸಂಪೂರ್ಣ ಉಗ್ರ ಜಗತ್ತಿನ ಹಿಂದಿರುವ ಏಕೈಕ ವ್ಯಕ್ತಿಯ ದೂರದರ್ಶಿತ್ವ ಮತ್ತು ವ್ಯಾಪಕ ಪ್ರಯತ್ನ ಈ ಕೃತಿಯಲ್ಲಿ ಕಾಣಬಹುದು.
ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...
READ MOREಅಬೋಟ್ಟಾಬಾದ್ ಕೃತಿಯ ಕುರಿತು ಲೇಖಕ ಸಂತೋಷಕುಮಾರ ಮೆಹೆಂದಳೆ ಅವರ ಮಾತು.