ಗಿರೀಶ ಕಾರ್ನಾಡ ಅವರು ಆಗಾಗ ಅಂದರೆ ವಿವಿಧ ಕಾಲಘಟ್ಟದಲ್ಲಿ ವಿವಿಧ ನಿಯತಕಾಲಿಕ-ಜರ್ನಲ್ ಗಳಿಗೆ ಬರೆದ ಬರಹಗಳನ್ನು ’ಆಗೊಮ್ಮೆ ಈಗೊಮ್ಮೆ' ಸಂಕಲನದಲ್ಲಿ ಸೇರಿಸಲಾಗಿದೆ. 'ನಾಟ್ಯಶಾಸ್ತ್ರ' ದಿಂದ ಹಿಡಿದು 'Fearless ನಾದಿಯಾ' ಚಿತ್ರಗಳವರೆಗೆ ನಡೆಸಿದ ಅನ್ವೇಷಣೆಯ ವರೆಗೆ ವೈವಿಧ್ಯಮಯ ಬರಹಗಳು ಈ ಸಂಕಲನದಲ್ಲಿವೆ.
ನಾಟ್ಯೋತ್ಪತ್ತಿ, ನಾಟ್ಯಧರ್ಮ, ಆಧುನಿಕ ಕಲೆ ಮತ್ತು ಸಾಮಾಜಿಕ ಪರಿವರ್ತನೆ, ಕನ್ನಡ ಸಿನೇರಂಗದಲ್ಲಿ ಜಾತಿ ಸಂಘರ್ಷ, ಹೊಸ ರಂಗಭೂಮಿಗಾಗಿ ಹುಡುಕಾಟ, ನಾಗರಿಕ/ ಸೈನಿಕ, ನಾಟಕ ಮತ್ತು ವೈಚಾರಿಕತೆ , ಕಾವ್ಯ ಬಗೆವ ಬಗೆ : ಹಳೆಯ ಕವಿತೆ, ಹೊಸ ವಿಮರ್ಶೆ, ಪೌರಾಣಿಕ ಇಲ್ಲವೆ ಐತಿಹಾಸಿಕ ವಸ್ತು ವಿನ್ಯಾಸ, (ಮಾಸ್ತಿಯವರ ಕಾಕನಕೋಟೆ), ನಾಟಕದಲ್ಲಿ ಸಮಕಾಲೀನ ದೃಷ್ಟಿಕೋನ, ಹಿಟ್ಟಿನ ಕೋಳಿ, ಫಿಯರನೆಸ್ ನಾದಿಯಾ (ವ್ಯಕ್ತಿ ಚಿತ್ರ), ಗ್ಲೋರಿಯಸ್ ಗೋಹಾರ, ಸತ್ಯದೇವ ದುಬೆ, ಇನ್ನೂ ಮುಂತಾದ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ.
ನಾಟಕಕಾರ ಗಿರೀಶ್ ಕಾರ್ನಾಡ್ ಅವರು ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ, ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...
READ MORE