ಲೇಖಕ ಬಸವರಾಜ ಫಕೀರ ಸುಣಗಾರ ಅವರ ಲೇಖನಗಳ ಸಂಕಲನ ‘ಆದರ್ಶ ಶಿಕ್ಷಕ : ಒಂದು ಚಿಂತನೆ’. ಕೃತಿಗೆ ಬೆನ್ನುಡಿ ಬರೆದ, ಶ್ರೀಮತಿ ವ್ಹಿ. ವ್ಹಿ. ಹಿರೇಮಠ್, “ಈ ಕೃತಿಯು ತುಂಬಾ ಅರ್ಥ - ಪೂರ್ಣ. 34 ಅಧ್ಯಾಯಗಳಿವೆ. ವಿವಿಧ ಪ್ರಮುಖ ಅಧ್ಯಾಯದಡಿ ಅತ್ಯಂತ ಮನೋಜ್ಞವಾಗಿ ವಿಷಯ ಮಂಡಿಸಿರುವುದು ಗ್ರಂಥಕರ್ತರ ಜಾಣ್ಮೆ ಎದ್ದು ಕಾಣಿಸುತ್ತದೆ. ಸಮಾಜಕ್ಕೆ ನೆರವಾಗುವಂತಹ ಪುಸ್ತಕ ಪ್ರಸ್ತುತ ಸಮಾಜಕ್ಕೆ ದಿಕ್ಕೂಚಿ ಎಂದರೂ ತಪ್ಪಿಲ್ಲ. ಎಲ್ಲ ಅಧ್ಯಾಯಗಳು ಓದುಗರ ಮನ ಮುಟ್ಟುವಂತಿದೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿಯವರು. ತಂದೆ ಫಕೀರಪ್ಪ, ತಾಯಿ ನಿಂಗಮ್ಮ. ಬಿಎ, ಟಿಸಿಎಚ್ ಪೂರೈಸಿದ್ದಾರೆ. ಪ್ರಶಸ್ತಿ: ಆದಶ೯ ಶಿಕ್ಷಕ ಪ್ರಶಸ್ತಿ,ಗುರು ಕುಲ ರಾಜ್ಯ ಪ್ರಶಸ್ತಿ, ವರ್ಷದ ವ್ಯಕ್ತಿ ಪ್ರಶಸ್ತಿ 2013,ಮೌಲ್ಯ ಶಿಕ್ಷಣ ಸಂಪದ ರಾಜ್ಯ ಪ್ರಶಸ್ತಿ, ವಿವಿಧ ಮಠಾಧೀಶರಿಂದ ಸೇವಾ ರತ್ನ ಪ್ರಶಸ್ತಿ. ಕೃತಿಗಳು: ಅಭಿಮಾನದ ನನ್ನೂರು(ಅಂಕಣ ಬರಹಗಳ ಸಂಕಲನ), ನಿಜಶರಣ ಅಂಬಿಗರ ಚೌಡಯ್ಯನವರು(ಲೇಖನಗಳ ಸಂಗ್ರಹ), ಆದರ್ಶ ಶಿಕ್ಷಕ: ಒಂದು ಚಿಂತನೆ (ಲೇಖನಗಳ ಸಂಕಲನ), ಅನಿಸಿದ್ದು. ...
READ MORE