ಸಿನಿಮಾ ನಿರ್ಮಾಪಕ- ನಿರ್ದೇಶಕ, ಪುಸ್ತಕ ಪ್ರಕಾಶಕ, ಕನ್ನಡ ಚಳವಳಿ, ರಂಗಭೂಮಿ, ಛಾಯಾಗ್ರಹಣ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ಗೌರಿ ಸುಂದರ್. ಇವರು ಮೂಲತಃ ಮೈಸೂರಿನವರು. ಅರಮನೆಯಲ್ಲಿ ನಡೆಯುವ ಗೌರಿ ಪೂಜೆಗೆ ಇವರ ಮನೆತನದ್ದೇ ಪೌರೋಹಿತ್ಯವಿತ್ತು. ಆದ್ದರಿಂದ, ಇವರ ಮನೆತನಕ್ಕೆ ‘ಗೌರಿ’ ಎಂಬ ಹೆಸರು ಸೇರಿಕೊಂಡಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲ ಕಾಲ ಗೈಡ್ ಆಗಿ ಕೆಲಸ ನಿರ್ವಹಿಸಿದ್ದರು. ಹೊಸಅಲೆಯ ಸಂಸ್ಕಾರ ಚಲನಚಿತ್ರ ನೋಡಿದ ಮೇಲೆ ಅವರು ಸಿನಿಮಾದತ್ತ ಮುಖ ಮಾಡಿದರು. ನಂತರ, ಅವರು ಹೊಸ ಅಲೆಯ ‘ಸಂದರ್ಭ’ ಸಿನಿಮಾ ಮಾಡಿದರು. ರಂಗಭೂಮಿ ಹಾಗೂ ದೂರದರ್ಶನದಲ್ಲಿ ಆಸಕ್ತಿ ಮೂಡಿ ನಾಟಕಕಾರ ಎ.ಎಸ್. ಮೂರ್ತಿ ಅವರ ಒಡನಾಟದಿಂದ ರಂಗಭೂಮಿ ತದನಂತರ ಪುಸ್ತಕೋದ್ಯಮಕ್ಕೂ ಪ್ರವೇಶಿಸಿದರು. ಸುಮಾರು 380ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತರಾಸು ಕಾದಂಬರಿಗಳ ಕುರಿತು ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. 01-01-2017 ರಂದು ಬೆಂಗಳೂರಿನಲ್ಲಿ ನಿಧನರಾದರು. .