ಲೇಖಕ ಡಿ.ಎಸ್.ಚೌಗಲೆ ಅವರ ಕವನ ಸಂಕಲನ ಕೃತಿ ʻಸುಡು ಕಾವಿನ ಒಣ ಎಲೆʼ. ಇಲ್ಲಿರುವ ಕವನಗಳು ಸಾಮಾಜಿಕತೆ, ಮನುಷ್ಯನ ಅಂತರಂಗ ಕುರಿತಾದ ವಸ್ತುಗಳನ್ನು ಒಳಗೊಂಡಿವೆ. ಪುಸ್ತಕದ ಬಗ್ಗೆ ದೇವೇಂದ್ರ ಬೆಳೆಯೂರು ಅವರು, “ಗೆಳೆಯ ಡಿ.ಎಸ್. ಚೌಗಲೆಯವರು ಚಿತ್ರಕಲೆಯಲ್ಲಿ ಮೂರ್ತದ ಮೂಲಕ ಅಮೂರ್ತವನ್ನೂ ಹಾಗೂ ಅಮೂರ್ತದಲ್ಲಿ ಮೂರ್ತದ ಹುಡುಕಾಟ ಮಾಡುತ್ತಿರುತ್ತಾರೆ. ಅವರ ನಾಟಕಗಳಲ್ಲಿ ಸಮಾಜದ ವಿವಿಧ ಮುಖಗಳು ಅನಾವರಣಗೊಳ್ಳುತ್ತ ಮನುಷ್ಯನ ಅಂತಃಕರಣ ಮತ್ತು ಸಂಬಂಧಗಳ ಆದ್ರತೆ ಮುಖ್ಯ ಭೂಮಿಕೆಯಾಗುತ್ತದೆ. ಅವರ ಕಾವ್ಯದಲ್ಲಿ ಮೂರ್ತ ಮತ್ತು ಅಮೂರ್ತ, ಸಾಮಾಜಿಕತೆ ಮತ್ತು ಮನುಷ್ಯನ ಅಂತರಂಗ ಇವೆಲ್ಲವೂ ಸಮನ್ವಯವಾಗಿ ಅದಕ್ಕೂ ಮಿಗಿಲಾದ ಆಧ್ಯಾತ್ಮಿಕತೆ ಆವರಿಸಿ ಬಿಡುತ್ತದೆ. ಭಕ್ತಿ ಕವಿಗಳು ತಮ್ಮ ಅಭಂಗಗಳಲ್ಲಿ ಸಾಮಾಜಿಕರಾಗಿಯೂ ಪಾಂಡುರಂಗ ವಿದ್ಧಲ ಸ್ವರೂಪದ ಅನುಭಾವಕ್ಕೆ ತೆರೆದುಕೊಂಡಂತೆ ಈ ಕವನಗಳಲ್ಲಿ ನೆಲ, ಮಣ್ಣು, ತಾಯಿ, ಹೆಣ್ಣು ಪ್ರೀತಿಗಳಲ್ಲಿಯೇ ಚೌಗಲೆಯವರು ಆಧ್ಯಾತ್ಮದ ದೈತ ಮತ್ತು ಅದೈತ ಅನುಭವಗಳಿಗೆ ತೆರೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು. 1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...
READ MORE