ಅರುಣಕುಮಾರ ಹಬ್ಬು ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು. ಪ್ರೌಢ ಶಿಕ್ಷಣವನ್ನು ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿ, ಪದವಿ ಪೂರ್ವ ಶಿಕ್ಷಣವನ್ನು ಧಾರವಾಡದ ಜೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರದಲ್ಲಿ ಪೂರ್ಣಗೊಳಿಸಿದರು. ಉಪನ್ಯಾಸಕನಾಗಿ ,ವರದಿಗಾರನಾಗಿ,ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.
ಕೃತಿಗಳು: ‘ದೃಷ್ಟಿ-ಸೃಷ್ಟಿ’ 64 ಲೇಖನಗಳ ಗ್ರಂಥ ಪ್ರಕಟನೆ, ನೀವು ಉತ್ತಮ ಸಂದರ್ಶಕರಾಗಬಯಸುವಿರಾ? , ಸುದ್ದಿ: ಜಗದಗಲ ಮುಗಿಲಗಲ, ವೈವಿಧ್ಯ ಕಲಾನಿಧಿ ಗೋಪಾಲಕೃಷ್ಣ ನಾಯಕರು: ಜೀವನ ಚರಿತ್ರೆ, ಗೌತಮ ಬುದ್ಧರ ತ್ರಿಪಿಟಕ ಅಂಗುತ್ತರ ನಿಕಾಯದ ಕನ್ನಡಾನುವಾದ ಮಹಿಳೆ ಮತ್ತು ಮಾಧ್ಯಮ ,ದಾರಾ ಶುಕೊಹ್: ಶ್ಯಾಟರ್ಡ್ ಡ್ರೀಮ್ಸ್ ಇಂಗ್ಲೀಷ್ ಕಾದಂಬರಿ.
ಪ್ರಶಸ್ತಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ‘ಧೀಮಂತ ನಾಗರಿಕ ಪ್ರಶಸ್ತಿ -2005’ ಪತ್ರಿಕಾ ರಂಗದ ಸಾಧನೆಗಾಗಿ ಮಾಡಿದ ಉತ್ತಮ ಸಾಧನೆಗೆ 2006ನೇ ಸಾಲಿನ ‘ಪತ್ರಕರ್ತ ಜಿ.ಆರ್ ಪಾಂಡೇಶ್ವರ ಪ್ರಶಸ್ತಿ’ ,ಪತ್ರಿಕಾ ರಂಗದ ಜೀವಮಾನದ ಸಾಧನೆಗಾಗಿ ‘ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವ ಪ್ರಶಸ್ತಿ’ .ಧಾರವಾಡ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೆಳನದಲ್ಲಿ ‘ಸುವರ್ಣವರ್ಷ ಪ್ರಶಸ್ತಿ’, ರೌಂಡ್ ಟೇಬಲ್ ಆಫ್ ಇಂಡಿಯಾ ವತಿಯಿಂದ 2014 ‘ಟೈಟನ್ಸ್ ಆಫ್ ಮೀಡಿಯಾ ಪ್ರಶಸ್ತಿ’ ಲೋಕಹಿತ ಟ್ರಸ್ಟ್ 2016ರ ‘ನಾರದ ಪ್ರಶಸ್ತಿ’ , 2021 ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ರಂಗದಲ್ಲಿ ಜೀವಮಾನದ ಸಾಧನೆಗೆ ಗೌರವ ಪ್ರಶಸ್ತಿ.