About the Author

ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು.  ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು. ಕನ್ನಡದ ಖ್ಯಾತ ಜಾಲತಾಣ 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಆಫ್ರಿಕಾ ಪ್ರವಾಸ ಕಥನವಾಗಿರುವ 'ಹಾಯ್ ಅಂಗೋಲಾ!' ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ. 

ಕನೆಕ್ಟ್ ಕನ್ನಡ ವೆಬ್ ಪತ್ರಿಕೆಯ 'ಪಟ್ಟಾಂಗ' ಅಂಕಣವೂ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ, ಪುರವಣಿಗಳಲ್ಲಿ ಇವರ ಕಥೆಗಳು, ಲೇಖನಗಳು, ಸರಣಿಬರಹಗಳು ಮತ್ತು ಅನುವಾದಗಳು ಪ್ರಕಟವಾಗಿವೆ. 2017 ರ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ಇವರ 'ಹುಲ್ಯಾದೈವ' ಕಥೆಯು ಟಾಪ್-25 ಕಥೆಗಳಲ್ಲಿ ಹದಿನೈದನೇ ಸ್ಥಾನವನ್ನು ಗಳಿಸಿಕೊಂಡಿತ್ತು. ಕನ್ನಡೇತರರಿಗೆ ಕನ್ನಡ ಕಲಿಸುವ ಉತ್ಸಾಹಿ ಯುವಸಮೂಹವಾದ 'ಕನ್ನಡ ಗೊತ್ತಿಲ್ಲ' ತಂಡಕ್ಕಾಗಿ ವ್ಯಂಗ್ಯಚಿತ್ರಗಳನ್ನೂ ರಚಿಸಿದ್ದಾರೆ. ಶ್ರೀ ಜಿ. ಎನ್. ಮೋಹನ್ ಸಂಪಾದಕತ್ವದ 'ಈ ಪರಿಯ ಸೊಬಗು', ಶ್ರೀ ಗುರುಪ್ರಸಾದ್ ಕುರ್ತಕೋಟಿ ಸಂಪಾದಕತ್ವದ 'ಎಲ್ಲರಂಥವನಲ್ಲ ನನ್ನಪ್ಪ' ಮತ್ತು 'ಅಪ್ಪರೂಪ', ಶ್ರೀ ಗಣೇಶ್ ಕೊಡೂರು ಸಂಪಾದಕತ್ವದ 'ನಿಮ್ಮ ಮಕ್ಕಳು ಯಾವ ಪುಸ್ತಕಗಳನ್ನು ಓದಬೇಕು?', ಶ್ರೀ ಗುಬ್ಬಚ್ಚಿ ಸತೀಶ್ ಸಂಪಾದಕತ್ವದ 'ಮರೆಯಲಾರದ ಸ್ನೇಹ'... ಇತ್ಯಾದಿ ಸಂಪಾದಿತ ಕೃತಿಗಳಲ್ಲೂ ಇವರ ಲೇಖನಗಳು ಮೂಡಿಬಂದಿವೆ.

ಪ್ರಸಾದ್ ನಾಯ್ಕ್

Awards