About the Author

ಕನಕಾಮೂರ್ತಿ ಮೂಲತಃ ನರಸೀಪುರದವರು. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದಿರುವ ಅವರು, 1974 ರಲ್ಲಿ ಡಿಪ್ಲೊಮಾ ಇನ್ ಕ್ಲೇಮಾಡಲಿಂಗ್ ನಲ್ಲಿ ಪರಿಣತಿ ಹೊಂದಿದ್ದಾರೆ. 1965 ರಿಂದ 1993 ರವರೆಗೆ ಕರ್ನಾಟಕದ ಪ್ರಸಿದ್ದ ಶಿಲ್ಪಿ ಶ್ರೀವಾದಿರಾಜರಲ್ಲಿ ಸಾಂಪ್ರದಾಯಿಕ ಶಿಲ್ಪತರಬೇತಿಯನ್ನು ಪಡೆದಿದ್ದಾರೆ. 1994ರಲ್ಲಿ ಚಾಲುಕ್ಯ ಶೈಲಿಯಲ್ಲಿ ಗಜಾಸುರಮರ್ದನ, 1996ರಲ್ಲಿ ಚಾಲುಕ್ಯ ಶೈಲಿಯಲ್ಲಿ ಗಣೇಶ, 1996ರಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ. 2000 ರಲ್ಲಿ ಒಂಭತ್ತು ಅಡಿಯ ಬೃಹತ್ ಗಣೇಶಶಿಲ್ಪ, 2001 ರಲ್ಲಿ ಗಣೇಶ-ಸರಸ್ವತಿ ರೂಪಣೆ, 2003 ರಲ್ಲಿ ಮಿಥಿಕ್ ಸೊಸೈಟಿಗಾಗಿ ಹೊಯ್ಸಳ ರಾಜವಂಶದ ಲಾಂಛನವನ್ನು ಫೈಬರ್ ಗ್ಲಾಸಿನಿಂದ ಮಾಡಿದ್ದಾರೆ. 2003 ರಲ್ಲಿ ಕಡಲತೀರದ ಭಾರ್ಗವ ಶಿವರಾಮಕಾರಂತರ ಶಿಲ್ಪವನ್ನು ಫೈಬರ್ ಗ್ಲಾಸಿನಿಂದ ರೂಪಿಸಿದ್ದಾರೆ. ಅವರ ನಿರ್ದೇಶನದಲ್ಲಿ ಕರ್ನಾಟಕದ ಹೊರಗೂ ಒಳಗೂ ನೂರಾರೂ ಶಿಲ್ಪ ಶಿಬಿರಗಳು ನಡೆದಿದ್ದು,1988 ರಿಂದ 2000ದ ವರೆಗೂ ಕರ್ನಾಟಕ, ಮುಂಬಯಿ, ಹೈದರಬಾದ್ ಮತ್ತು ಲಂಡನ್ ನಲ್ಲಿ ಶಿಲ್ಪಗಳ ಪ್ರದರ್ಶನ ಮಾಡಿ ದೇಶ-ವಿದೇಶೀಯರಿಂದ ಮೆಚ್ಚುಗೆಯನ್ನು ತಿಳಿಸಿದ್ದಾರೆ. ಚಂದನ,ಈಟಿವಿ, ಉದಯಟಿವಿಗಳಲ್ಲಿ ಅವರ ಶಿಲ್ಪ ಶ್ರೀಮಂತಿಕೆ ಹಾಗೂ ಸ್ವಾನುಭವಗಳು ಪ್ರಸಾರಗೊಂಡಿರುತ್ತದೆ. ದಿವಂಗತ ಡಿ. ವಾದಿರಾಜರನ್ನು ಕುರಿತು ಕರ್ನಾಟಕ ಶಿಲ್ಪ ಅಕಾಡೆಮಿಗಾಗಿ ‘ಉತ್ತುಂಗ ಕುಶಲ ಶಿಲ್ಪಿ’ ಎಂಬ ಗ್ರಂಥವನ್ನು ರಚಿಸಿಕೊಟ್ಟಿದ್ದಾರೆ.

ಕೃತಿಗಳು: ನಮ್ಮದನಿ(2008), ಹೌದೆ! ಇದು ನಾನೇ(2014) ಪ್ರಶಸ್ತಿಗಳು: 1970 ರಲ್ಲಿ ಕರ್ನಾಟಕ ಲಲಿತ ಅಕಾಡೆಮಿಯ ವಾರ್ಷಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಿತ್ರಕಲಾಪರಿಷತ್ತಿನಿಂದ ವಿಶೇಷ ಪುರಸ್ಕಾರ(1976), ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ(1996), ಕರ್ನಾಟಕ ಶಿಲ್ಪ ಅಕಾಡೆಮಿಯಿಂದ ಪ್ರಶಸ್ತಿ(1999), ಸ್ವಾನಂದ ಕಲಾಶ್ರೀ ಪುರಸ್ಕಾರ, ಶಿಲ್ಪಕಲಾ ಕೋವಿದೆ ಬಿರುದು(2005), ಮಹಿಳಾ ವೇದಿಕೆಯಿಂದ ‘ನಾರೀರತ್ನ’ ಪುರಸ್ಕಾರ(2007), ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದ ‘ಸುವರ್ಣ ಕರ್ನಾಟಕ’ ಪ್ರಶಸ್ತಿ(2007), ನಾಡೋಜ ಆರ್. ಎಂ. ಹಡಪದ್ ಪ್ರಶಸ್ತಿ(2011), ಕರ್ನಾಟಕ ರಾಜ್ಯಸರ್ಕಾರದ ‘ಜಕಣಾಚಾರಿ’ ಪ್ರಶಸ್ತಿ(2011)

ಕನಕಾಮೂರ್ತಿ