ಲೇಖಕ ಶ್ರೀಧರ ಗೌಡರ ಅವರು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ದವರು. 1982 ಜುಲೈ 5 ರಂದು ಜನಿಸಿದರು. ಕೂಡಲಸಂಗಮ, ಚಿಮ್ಮಲಗಿ, ಇಲಕಲ್ಲ, ರಾಯಚೂರಗಳಲ್ಲಿ ವಿದ್ಯಾಬ್ಯಾಸ ಮಾಡಿದ್ದು, ಇತಿಹಾಸ, ಕನ್ನಡ, ರಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತರ ಪದವಿ, ಬಿಇಡಿ ಪದವಿ ಪಡೆದಿದ್ದಾರೆ. 2013 ಜುಲೈ 12 ರಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಓತಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ತೋಟದಾರ್ಯ ಮಠದ ಸಮಾಜ ಮುಖಿ ಚಳುವಳಿಗಳು : ವಿಶ್ಲೇಷಣಾತ್ಮಕ ಅಧ್ಯಯನ ವಿಷಯದ ಮೇಲೆ ಪಿಎಚ್.ಡಿ ಕೈಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದಿಂದ 2017ರ ಗ್ರಾಮೀಣ ಪತ್ರಕರ್ತ ಪ್ರಶಸ್ತಿ, ಬಾಗಲಕೋಟೆ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಸತತ ಮೂರು ವರ್ಷಗಳ ಗರಿಷ್ಠ ಫಲಿತಾಂಶ ಸಾಧನೆಗಾಗಿ 2018ರ ಉತ್ತಮ ಶಿಕ್ಷಕ ಪ್ರಶಸ್ತಿ, ಕೂಡಲಸಂಗಮ ಬಸವ ಧರ್ಮ ಪೀಠದಿಂದ 32ನೇ ಶರಣ ಮೇಳದಲ್ಲಿ 2019ರ ಶರಣ ಸೇವಾ ರತ್ನ ಪ್ರಶಸ್ತಿ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಪ್ರವಾಸಿತಾಣ, ಬಸವಣ್ಣ, ಜೀವಜಗತ್ತು, ಶರಣೆಯರ ಚರಿತೆ, ವಚನಾಮೃತ ಎಂಬ ಐದು ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅನೇಕ ಲೇಖನ, ಚಿಂತನೆಗಳು ಪ್ರಕಟಗೊಂಡಿವೆ.