ಯಶೋಮತಿ ರವಿ ಬೆಳಗೆರೆ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕಸಾರಂಗಿ ಗ್ರಾಮದವರು. ಬಿಕಾಮ್, ಇಂಟರ್ನ್ಯಾಷನಲ್ ಗ್ರಾಜುಯೇಟ್ ಡಿಪ್ಲೊಮೋ ಇನ್ ಕೌನ್ಸಿಲಿಂಗ್ ಸ್ಕಿಲ್ಸ್,(IGDCS), ಡಿಪ್ಲೊಮೋ ಇನ್ ಬೊಟಿಕ್ ಮ್ಯಾನೇಜ್ ಮೆಂಟ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಅಕ್ಷರ ವಿನ್ಯಾಸಕಿ, ಪುಟ ವಿನ್ಯಾಸಕಿ, ಅಂಕಣಕಾರ್ತಿ, ಪ್ರಕಾಶಕಿ, ಲೇಖಕಿ, ರವಿ ಬೆಳಗೆರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕಿ ಹಾಗೂ ಅನಂತ ನೋಟ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಅಕ್ಷರ ವಿನ್ಯಾಸಕಿಯಾಗಿ ಆರಂಭಗೊಂಡ ಪತ್ರಿಕೋದ್ಯಮದ ಒಡನಾಟ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆಯಾಗಿ, ವ್ಯವಸ್ಥಾಪಕ ನಿರ್ದೇಶಕಿಯಾಗಿ, ಓ ಮನಸೇ ಮ್ಯಾಗಝೀನಿನ ಹಾಗೂ ಭಾವನಾ ಪ್ರಕಾಶನದ ಪುಸ್ತಕಗಳ ಪುಟ ವಿನ್ಯಾಸಕಿಯಾಗಿ, ಬೆಳಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯ ನಿರ್ವಾಹಕ ಮಾಲೀಕಳಾಗಿ, ಸುಮಾರು ಇಪ್ಪತ್ನಾಲ್ಕು ವರ್ಷಗಳ ಕಾಲ ಸತತವಾಗಿ ಅಕ್ಷರಲೋಕದ ಒಡನಾಟದ ಅನುಭವದಿಂದ ಈಗ ಸ್ವತಂತ್ರವಾಗಿ ರವಿ ಬೆಳಗೆರೆ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಉತ್ತಮ ಕೃತಿಗಳನ್ನು ಹೊರತರುವ ಉದ್ದೇಶವನ್ನು ಹೊಂದಿದ್ದಾರೆ. ಹಾಗೂ ವಿಶ್ವವಾಣಿ ಪತ್ರಿಕೆಯಲ್ಲಿ ಎಂಭತ್ತು ಅಂಕಣಗಳನ್ನು ಬರೆಯುವ ಮೂಲಕ ಅಂಕಣಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳು: ರವಿ ಬೆಳಗೆರೆ ಸಾರಥ್ಯದಲ್ಲಿ ಹಾಯ್ ದಿನಗಳು, ಯಶೋವಾಣಿ ಓದುಗ ದೊರೆಯ ತೀರದ ನೆನಪುಗಳು.