ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ.
ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ದಾದಾಗಿರಿಯ ದಿನಗಳು ಭಾಗ 2, ದಾದಾಗಿರಿಯ ದಿನಗಳು ಭಾಗ 3. ಈ ಮೂರೂ ಭಾಗಗಳನ್ನು ಕ್ರೋಡಿಕರಿಸಿ ಇಂಗ್ಲೀಷಿನಲ್ಲಿ 'My Days in the Underworld - Rise of Bangalore Mafia' ಎಂಬ ಪುಸ್ತಕವನ್ನು ಬರೆದಿದ್ದಾರೆ.
ಎದೆಗಾರಿಕೆ ಆ ದಿನಗಳು ಮತ್ತು ಕಳ್ಳರ ಸಂತೆ ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ .
ತಮಸ್ಸು ಚಿತ್ರವನ್ನು ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನಮಾಡಿದ್ದಾರೆ. ತಮಸ್ಸು ಚಿತ್ರಕ್ಕೆ ಎರಡನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಯನ್ನು 2010-11ಸಾಲಿನಲ್ಲಿ ಪಡೆದಿದ್ದಾರೆ. ಅದೇ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಸಹ ಪಾತ್ರರಾಗಿದ್ದಾರೆ.
'ದಾದಾಗಿರಿಯ ದಿನಗಳು' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಲಭಿಸಿದೆ.