ಕೆ. ಮಹಾಂತೇಶ್ ಅವರು ದಾವಣಗೆರೆ ಸಮೀಪದ ಆವರೆಗೆರೆ ಗ್ರಾಮದವರು. . ದಾವಣಗೆರೆಯಲ್ಲಿ ಬಿಎ ಎಲ್ಎಲ್ ಬಿ ಪದವೀಧರರು. ವಕೀಲ ವೃತ್ತಿಯಲ್ಲಿದ್ದೂ ಸಾಹಿತ್ಯದಲ್ಲಿ ಆಸಕ್ತರು. 2000 ರಿಂದ ಬೆಂಗಳೂರಿನಲ್ಲಿ ವಾಸ. ಯುವಜನ ಸಂಘಟನೆಯಲ್ಲಿ ಕೆಲಸ. 2001 ರಲ್ಲಿ ಆಫ್ರಿಕಾದ ಅಜ್ಜೀರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಯುವಜನ ವಿದ್ಯಾರ್ಥಿ ಸಮ್ಮೇಳನದಲ್ಲಿ ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರು. ಪಶ್ಚಿಮ ಘಟ್ಟದ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಅಧ್ಯಯನ, ಕೇರಳದಲ್ಲಿ ಜಾರಿಗೊಂಡ ಜನತಾ ಯೋಜನೆ ಸೇರಿ ಹತ್ತಾರು ಲೇಖನಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
2006 ರಿಂದ ಟಿ.ವಿ- 9 ಕರ್ನಾಟಕ ಸುದ್ದಿವಾಹಿನಿಯಲ್ಲಿ ಪತ್ರಕರ್ತರಾಗಿ ಹಾಗೂ 2007 ರಲ್ಲಿ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಕೆಲಸ, 2010 ರಿಂದ ಸಿಐಟಿಯು ಸಂದೇಶ ಮಾಸಿಕ ಪತ್ರಿಕೆಯ ಕಾರ್ಯನಿರ್ವಹಕರಾಗಿ ನಂತರ ಸಂಪಾದಕನಾಗಿ ಕೆಲಸ ಮಾಡಿದ್ದಾರೆ. 2118 ಅಕ್ಟೋಬರ್ ನಲ್ಲಿ ಯುರೋಪ್ ನ ಸೈಪ್ರಸ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಬಿಲ್ಡಿಂಗ್ ಅಂಡ್ ವುಡ್ ವರ್ಕರ್ಸ್ ಸಭೆಯಲ್ಲಿ ಭಾರತವನ್ನು ಪತ್ರಿನಿಧಿಸಿದ ನಿಯೋಗದ ಸದಸ್ಯರಾಗಿದ್ದರು.
ಪಿ ರಾಮಮೂರ್ತಿ ಕಾರ್ಮಿಕ ಚಳವಳಿಯ ಹಿರಿಯ ನೇತಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಜೀವನ ಚರಿತ್ರೆಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊಸತಂದ ಸೆಬಾಲ್ಟ್ರನ್ ಕುರಿತ ಸಂಚಿಕೆಯಲ್ಲಿ ಶ್ರಮಜೀವಿ ಹಮಾಲಿ ಕಾರ್ಮಿಕರ ಕುರಿತ ಲೇಖನ ಪ್ರಕಟ, ಕನ್ನಡ ಪುಸ್ಥಕ ಪ್ರಾಧಿಕಾರದಿಂದ 'ಒಡಲಾಳದ ಕಥನಗಳು" ಕಥಾ ಸಂಕಲನ ಬಿಡುಗಡೆಯಾಗಿದೆ.