ಅನುವಾದಕ, ಲೇಖಕ ಅನಂತ ಹುದೆಂಗಜೆ ಮೂಲತಃ ಕಾರ್ಕಳ ತಾಲೂಕಿನ ಈದು ಗ್ರಾಮದವರು. ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಸ್ತವ್ಯ. ವಿದ್ಯಾರ್ಥಿಯಾಗಿದ್ದಾಗಲೇ ಅವರು ಅಂಕಣ, ದೈನಿಕ ಧಾರಾವಾಹಿ ಬರವಣಿಗೆಯಲ್ಲಿ ತಮ್ಮನ್ನ ತೊಡಗಿಸಿಕೊಂಡು, ಪತ್ರಿಕೋದ್ಯಮದಲ್ಲಿ 4ನೇ ರ‍್ಯಾಂಕ್ ಅನ್ನು ಪಡೆದುಕೊಂಡಿದ್ದರು. ಪತ್ರಕರ್ತನಾಗಿ ವೃತ್ತಿ ಜೀವನವನ್ನು ಆರಂಭಿಸಿ ಕನ್ನಡ ಜನಾಂತರಂಗ, ಮಂಜುವಾಣಿ, ಕನ್ನಡಪ್ರಭ ಹಾಗೂ ಉದಯವಾಣಿಯಲ್ಲಿ ಬಹು ಕಾಲ ಕಾರ್ಯನಿರ್ವಹಿಸಿದರು. ಅವರು 15ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ಬರೆದಿದ್ದಾರೆ.
ಕೃತಿಗಳು: ಇದುವೇ ನಮ್ಮ ಸಂಸ್ಕೃತಿ, ಭಾರತ ಇಸ್ಲಾಂ ಮತ್ತು ಗಾಂಧಿ, ಮೊಗ್ಗು ಅರಳುವ ಹೊತ್ತು, ಎಲ್ಲ ಅವನ ಹೆಸರಿನಲ್ಲೇ, ಮಹಾನಡಾವಳಿ, ಮಾತೃಶ್ರೀ ರತ್ನಮ್ಮ, ವಿಂಶತಿ ಸಂಭ್ರಮ ಇತ್ಯಾದಿ.