ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ವರದಿಗಳಿಗೆ ಮಿಡಿದ ಹೃದಯಗಳು ನೂರಾರು. ವರದಿಯಿಂದಾಗಿ ಬದುಕುಳಿದ ಜೀವಗಳು ಕೆಲವಿದೆ. ಸಾಂತ್ವನ ದೊರಕಿದ ಜೀವಗಳು ಅದೆಷ್ಟೋ. ಕಥಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ, ಪತ್ರಿಕೋದ್ಯಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ, ಮಂಗಳೂರು ಆಕಾಶವಾಣಿಯಲ್ಲಿ ತುಳು ಭಾಷಣ, ರೂಪಕ, ನಾಟಕ ಪ್ರಸಾರವಾಗಿದ್ದು, ಧರ್ಮಸ್ಥಳದ ಸ್ವಚ್ಛತೆ ಕುರಿತು ಮಾಡಿದ ರೂಪಕ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಲ್ಲಿ ಪ್ರಸಾರವಾಗಿದೆ. ಮಕ್ಕಳ ನಾಟಕ ಚಂದನ ವಾಹಿನಿಯಲ್ಲಿ ಪ್ರಸಾರವಾಗಿದೆ. ಶ್ರೀ ಶಂಕರ ವಾಹಿನಿಗಾಗಿ ಒಡಿಯೂರು ಕ್ಷೇತ್ರದ ಕುರಿತು 10 ಕಂತುಗಳ ಸಾಕ್ಷ್ಯ ಚಿತ್ರ ರಚಿಸಿ, ನಿರ್ದೇಶಿಸಿದ್ದಾರೆ. ಕುಂದಾಪುರ ಪುರಸಭೆಯ ತ್ಯಾಜ್ಯ ವಿಲೇ ಉರಿತು ಸಾಕ್ಷ್ಯಚಿತ್ರ ನಿರ್ದೇಶಿಸಿದ್ದಾರೆ.
ಈಗಾಗಲೇ 17 ಪುಸ್ತಕಗಳು ಪ್ರಕಾಶನ ಕಂಡಿದ್ದು ಯುಗಪ್ರವರ್ತಕ, ಹೊಸಬೆಳಕು, ಅಂಡಮಾನ್ ಅಂಡಮಾನ್, ರಸಮಯ ಸಾವಯವ, ನಮ್ಮ ಪ್ರಧಾನ ಮಂತ್ರಿಗಳು, ಶಾಂತಿವನದ ನಡಿಗೆ ಗಿನ್ನಿಸ್‌ನೆಡೆಗೆ, ನಕ್ಸಲ್ ನೆತ್ತರ ಹಾದಿಯಲ್ಲಿ, ೨೦೧೬ರ ನೊಬೆಲ್ ಪ್ರಶಸ್ತಿ ಪುರಸ್ಕೃತರು, ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ, ಬಾರ್ಕೂರು, ನೋಬೆಲ್ ಪುರಸ್ಕೃತರು, ನಮೋ ಮಂಜುನಾಥ, ರಂಗಾಂತರಂಗ ಪುಸ್ತಕಗಳು ಪ್ರಕಟವಾಗಿವೆ.