About the Author

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದದವರಾದ ಎಂ.ಡಿ.ಚಿತ್ತರಗಿಯವರು ಹುನಗುಂದ- ಇಳಕಲ್ಲಿನಲ್ಲಿ ಪದವಿಪೂರ್ವದವರೆಗಿನ ಶಿಕ್ಷಣವನ್ನು ಪೂರೈಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಕ್ರಮವಾಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗಗಳಲ್ಲಿ ಬಾಹ್ಯವಾಗಿ ಪೂರೈಸಿದ್ದಾರೆ. ಬಿ-ಇಡಿ ಪದವಿಯನ್ನು ಏಳನೆಯ ರ್ಯಾಂಕಿನೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುವ ಇವರು ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು, ಈಗ ಉನ್ನತ ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ, ಮಾರ್ಗದರ್ಶನದೊಂದಿಗೆ ಹುನಗುಂದದಲ್ಲಿ ʼಹೊನ್ನಕುಸುಮ ಸಾಹಿತ್ಯ ವೇದಿಕೆʼಯೊಂದನ್ನು ಗೆಳೆಯರೊಟ್ಟಿಗೆ ಕಟ್ಟಿಕೊಂಡು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಮಾರ್ಗದಲ್ಲಿ ನಿರಂತರವಾಗಿ ಸಕ್ರೀಯರಾಗಿದ್ದಾರೆ. ಇವರ ಕೃತಿಗಳೆಂದರೆ- 2017ರಲ್ಲಿ ಪಿಯು ಕಾಲೇಜು ಉಪನ್ಯಾಸಕರಿಗಾಗಿ ʼಏಣಿʼ ಪರೀಕ್ಷಾ ಮಾರ್ಗದರ್ಶಿ, 2021 ರಲ್ಲಿ ʼಮಥನʼ ವಿಮರ್ಶಾ ಕೃತಿ ಹಾಗೂ ʼಕಥಾತಪಸ್ವಿ (ಸಂಪಾದನೆ), 2022 ರಲ್ಲಿ ʼಗಾಯಗೊಂಡಿವೆ ಬಣ್ಣ! ಕವನಸಂಕಲನ ಹಾಗೂ 2023 ರಲ್ಲಿ ʼಅಕ್ಷರ ಹೂʼ (ಪಂದಳ) ಎಂಬ ಹೊಸ ಮಾದರಿಯ ಹನಿಗವಿತೆಗಳನ್ನು ಪ್ರಕಟಿಸಿದ್ದಾರೆ.

ಎಂ.ಡಿ.ಚಿತ್ತರಗಿ