ಲೇಖಕ, ವಿಮರ್ಶಕ, ಸಂಪಾದಕ, ಅನುವಾದಕ ಎಸ್. ಪ್ರಸಾದಸ್ವಾಮಿ ಅವರು ಜನಿಸಿದ್ದು 1965 ಜುಲೈ 21ರಲ್ಲಿ. ಹುಟ್ಟೂರು ಚಿತ್ರದುರ್ಗ. ಪ್ರಸ್ತುತ ಬೆಂಗಳೂರಿನ ಟಿ ದಾಸರಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರೊಫೆಸರ್- ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮನ್ನು ಕಾಲೇಜು ದಿವಸಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಸಾದಸ್ವಾಮಿಯವರ ಪ್ರಮುಖ ಕೃತಿಗಳೆಂದರೆ ನೀರು ತಂದವರು, ರಂಗರಾವಣ, ಶೀಲವೆಂಬುದು ಸೂತಕ, ಲೋಕದ ಪರಿಯೆ ಅಲ್ಲ ಇವರ ಪ್ರಮುಖ ಕೃತಿಗಳು. ಇವರಿಗೆ ಕೆ.ವಿ. ಸುಬ್ಬಣ್ಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.