ಕೇತಕೀವನ ಎಂಬ ಕೃತಿಯು ಡಿ.ವಿ.ಜಿ ಅವರ ಕವನ ಸಂಕಲನವಾಗಿದೆ. ಈ ಪದ್ಯ (ಅಥವಾ ಪದ್ಯಾಭಾಸ)ಗಳಲ್ಲಿ ನನ್ನದೇ ಆದ ದಾರಿಗಳನ್ನು ಹಿಡಿಯುವ ಸಾಹಸ ಮಾಡಿದ್ದೇನೋ, ಹೇಗೋ! ಕನ್ನಡವು ಬೆಳೆಯುತ್ತಿರುವ ಭಾಷೆ: ಜನದ ಬಳಕೆಯ ಭಾಷೆ. ಇದರ ಅಭಿವೃದ್ಧಿ ಸಂಪೂರ್ಣವಾದದ್ದಲ್ಲ. ಇಂದಿನ ಜನದ ಬಳಕೆಯನ್ನು ಕೊಂಚ ಅಂಗೀಕರಿಸಿದಲ್ಲದೆ ವಾಕ್ಯಗಳು ಅರ್ಥವಾಗುವುದು ಕಷ್ಟ. ಕನ್ನಡದಲ್ಲಿ ಜನರಿಗೆ ಪದ್ಯದಲ್ಲಿ ಉತ್ಸಾಹ ಕಡಮೆಯಾಗಿರುವುದಕ್ಕೆ ಭಾಷೆಯ ಕಷ್ಟ ಒಂದು ಕಾರಣವಿರಬಹುದು. ಬರೆದಿರುವುದು ಸುಲಭ ಗ್ರಾಹ್ಯವಾಗಬೇಕೆಂಬುದು ನನಗೆ ಒಂದು ಆಶೆ. ಇದು ನಡೆಯಬೇಕಾದರೆ ವಾಚಕರೂ ಕೊಂಚ ಸಹಕರಿಸಬೇಕೆಂದು ಬೇಡುತ್ತೇನೆ. ಎಂದು ಪುಸ್ತಕದ ಬಗ್ಗೆ ಲೇಖಕರು ತಿಳಿಸಿದ್ದಾರೆ.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE