ಜೀಯು ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಪತ್ರಿಕೋದ್ಯಮ ಮತ್ತು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಉದಯವಾಣಿ ಹಿರಿಯ ವರದಿಗಾರನಾಗಿ 50 ವರ್ಷಗಳಿಂದ ಕೆಲಸನಿರ್ವಹಿಸಿದ್ದಾರೆ . ಸಂಯುಕ್ತ ಕರ್ನಾಟಕ ಪತ್ರಿಕೆಯ ಹೊನ್ನಾವರದ ವರದಿಗಾರನಾಗಿ , ಗ್ರಾಮ ವಿಕಾಸ ವಾರಪತ್ರಿಕೆಯ ಸಂಪಾದಕನಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. “ಜೋಕುಮಾರ ಸ್ವಾಮಿ”, “ಅಂಧಯುಗ”, “ಬೇಲಿ ಮತ್ತು ಹೊಲ”, “ಆಷಾಢದ ಒಂದು ದಿನ”, ನಾಟಕಗಳನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಹರಿಶ್ಚಂದ್ರ ಭಟ್ ನಿರ್ದೇಶಿಸಿದ “ಶೋಧ”,, ಕಾಶಿನಾಥರ “ಅನುಭವ”, ಅಂಬರೀಶ ಜೊತೆ “ಗಿರಿಬಾಲೆ”, ಚಲನಚಿತ್ರದಲ್ಲಿ, “ಅಪ್ಸರಧಾರಾ” ,ವಿಶಾಲರಾಜ್ ನಿರ್ದೇಶನದ “ದಂಡಿ”ಯಲ್ಲಿ ನಟಿಸಿದ್ದಾರೆ.
ಕೃತಿಗಳು : ೭೧ ಅಭಿನಂದನಾ ಗ್ರಂಥ, “ಉತ್ತರ ಕನ್ನಡ ಕಥೆ-ವ್ಯಥೆ” , “ಕರಾವಳಿ” (ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು),“ಇಳೆ ಕಾದಿದೆ ಮನ ಅರಳಿದೆ”, “ಮುರ್ಡೇಶ್ವರ ಮತ್ತು ಇಡಗುಂಜಿ”ಯ ಕ್ಷೇತ್ರ ಪರಿಚಯ ಪುಸ್ತಕಗಳು. “ಕರ್ಮಯೋಗಿ ಡಾ. ಆರ್.ಎನ್. ಶೆಟ್ಟಿ”, “ಬಹುಮುಖಿ” “ಅಕ್ಷರ ಭಾರತಿ”
ಪ್ರಶಸ್ತಿಗಳು : ಉ.ಕ. ಜಿಲ್ಲಾ ಪತ್ರಕರ್ತರ ಸಂಘದಿಂದ ಶಾಮರಾವ್ ಪ್ರಶಸ್ತಿ, 2002ರಲ್ಲಿ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, 2012 ರಲ್ಲಿ ರಾಜ್ಯ ಪತ್ರಕರ್ತರ ಸಂಘದಿಂದ ಡಿ.ವಿ.ಜಿ. ಜನ್ಮದಿನೋತ್ಸವ ಪುರಸ್ಕಾರ, 2015 ರಲ್ಲಿ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ. 2017 ನೇ ಸಾಲಿನಲ್ಲಿ ಡಾ|| ಟಿ.ಎಂ.ಎ. ಪೈ ಆರೋಗ್ಯ ಸೇವಕ ಅವಾರ್ಡ್, 2018ನೇ ಸಾಲಿನಲ್ಲಿ ಬೆಂಗಳೂರು ಸಮರ್ಥ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ‘ಕೆಂಪೇಗೌಡ ಪ್ರಶಸ್ತಿ’.