ದಕ್ಷಿಣ ಕನ್ನಡದ ಉಡುಪುಮೂಲೆಯವರಾದ ವಿದುಷಿ ಅನುಪಮಾ ರಾಘವೇಂದ್ರ ಭರತನಾಟ್ಯ ಕಲಾವಿದೆ, ನೃತ್ಯ ಶಿಕ್ಷಕಿ, ನೃತ್ಯ ಸಂಯೋಜಕಿ, ಬರಹಗಾರ್ತಿ, ಅಂಕಣಗಾರ್ತಿ, ಕಥಾಗಾರ್ತಿ, ಯಕ್ಷಗಾನ ಕಲಾವಿದೆ, ಅರ್ಥಧಾರಿ ಹಾಗೂ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಸಂಸ್ಥೆಯ ಸ್ಥಾಪಕಾಧ್ಯಕ್ಷೆ.
ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇವರ ಹಲವಾರು ಕಥೆ , ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನುಪಮಾ ಅವರ ಕಥೆಗಳಿಗೆ 2016 ರ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ , 2017 ರಲ್ಲಿ ಒಪ್ಪಣ್ಣ ಪ್ರತಿಷ್ಠಾನ ಏರ್ಪಡಿಸಿರುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಕೃತಿಗಳು: ನೃತ್ಯ, ಸಂಗೀತ , ಯಕ್ಷಗಾನ ಕಲಾ ವಿಷಯಗಳ ಬಗೆಗಿನ ಲೇಖನಗಳ ಸಂಕಲನ ‘ಕಲಾತರಂಗ ಕಲಾಂತರಂಗ’ ( 2017), ಹತ್ತು ಹವ್ಯಕ ಕಥೆಗಳ ಸಂಕಲನ ‘ಹತ್ತಗುಳು’ (2018), ‘ತಲ್ಲಣಗಳ ಪಲ್ಲವಿ’ ಎಂಬ ಕನ್ನಡ ಕಥಾ ಸಂಕಲನ (2019) ಪ್ರಕಟಗೊಂಡಿದೆ.
2011 ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರ, 2011 ರಲ್ಲಿ ಬೆಂಗಳೂರಿನಲ್ಲಿ ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, 2013 ರಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿಗಳು ಲಭಿಸಿವೆ.