ಶಿವಗಂಗಾ ರುಮ್ಮಾ ಜನವರಿ 1, 1969 ರಲ್ಲಿ ಜನಿಸಿದರು. ಚಿಂತಕರು, ಬಸವತತ್ತ್ವ ಹಾಗೂ ಕಾರ್ಲ್ ಮಾರ್ಕ್ಸ್ ತತ್ತ್ವಗಳನ್ನು ಅಧ್ಯಯನ ಮಾಡಿದವರು. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿಯ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದು, ಪ್ರಭಾರಿ ಕುಲಸಚಿವರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅಕ್ಕನಾಗಮ್ಮ, ನೀಲಾಂಬಿಕೆ, ಬಂದೂಕಿನ ಬಾಯ ಗುಬ್ಬಿ ಗೂಡು, ಕಾಲದ ಮಾಯೆ, ನೀರ ನುಡಿ, ಹೊತ್ತು ಹೋಗದ ಮುನ್ನ, ತಳಕ್ಕೆ ನೀರೆರೆದರೆ ಮೊದಲಾದ ಕೃತಿಗಳನ್ನು ರಚಿಸಿದ್ದಲ್ಲದೇ, "ನಡುಗನ್ನಡ ಸಾಹಿತ್ಯ" ಸಂಗ್ರಹ, 371 (ಜೆ) ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ, ಮತ್ತು ಆದಿಲ್ ಶಾಹಿ ಕಾಲದ ಕರ್ನಾಟಕದ ಬಹು ಸಂಸ್ಕೃತಿ ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಹಳೆಗನ್ನಡ ಮತ್ತು ಭಾಷಾ ಶಾಸ್ತ್ರದ ಮೇಲೆ ಅಧಿಕೃತ ಜ್ಞಾನ ಹೊಂದಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷರೂ ಆಗಿದ್ದಾರೆ.
ಬೀದರ ಜಿಲ್ಲೆಯ ಜನಪದ ಆಹಾರ ಪದ್ಧತಿ ಹಾಗೂ ಆರೋಗ್ಯ -ಇವರ ಕೃತಿ. ದೇಸಿ ಆಹಾರ ವಿಮುಖತೆಯಿಂದಾಗಿಯೇ ಮನುಷ್ಯರು ಹಲವು ರೋಗಗಳಿಗೆ ತುತ್ತಾಗುತ್ತಿರುವ ಈ ಕಾಲದಲ್ಲಿ, ಒಂದು ಪ್ರದೇಶದ ಆಹಾರ ಸಂಸ್ಕೃತಿಯ ದಾಖಲೀಕರಣವಾಗಿ ಈ ಕೃತಿ ಮಹತ್ವ ಪಡೆದಿದೆ.