ಲೇಖಕ ಜಿ.ಆರ್. ಸಂತೋಷ ಅವರು ಬೆಂಗಳೂರಿನವರು. ಭಾರತೀಯ ಸಂಸ್ಕೃತಿಯ ಆಸಕ್ತರು. ಈ ಕುರಿತು ಹತ್ತು ಹಲವು ಬರಹಗಳನ್ನು ಬರೆದಿದ್ದು, ಬೆಂಗಳೂರು ಆಕಾಶವಾಣಿಯಿಂದ ಪ್ರಸಾರಗೊಂಡಿವೆ. ಆಫ್ರಿಕಾದ ತಾಂಜೇನಿಯಾ ದೇಶದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ನಿರ್ದೇಶಕರಾಗಿದ್ದರು. ಧ್ವಜವೆಂದರೆ ಬಟ್ಟೆಯಲ್ಲ ಎಂಬುದು ಇವರ ಲೇಖನಗಳ ಸಂಕಲನ.