ಲೇಖಕ ಜರಗನಹಳ್ಳಿ ಶಿವಶಂಕರ್ ಅವರ ಆಧ್ಯಾತ್ನಿಕ್ ಬರಹಗಳ ಸಂಗ್ರಹ ’ದೇವರು’.66ನೇ ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದ ಮೂಲಕ ತೆರೆ ಕಂಡ ಕೃತಿಯಿದೆ. ಈ ಕೃತಿಗೆ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ಜರಗನಹಳ್ಳಿ ಶಿವಶಂಕರ್ ಅವರು ಬೆಂಗಳೂರಿನ ಜರಗನಹಳ್ಳಿಯಲ್ಲಿ 1949 ಸೆಪ್ಟೆಂಬರ್ 8ರಂದು ಜನಿಸಿದರು.ಬಿ.ಕಾಂ ಪಧವಿದರರಾಗಿದ್ದ ಅವರು ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಒಲವಿನ ಕ್ಷೇತ್ರ. ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಹನಿಗವಿತೆಗಳು, ಕವಿತೆಗಳು ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಪುಸ್ತಕ ಪ್ರಕಾಶನವೊಂದನ್ನು ಆರಂಭಿಸಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ 'ಶುಭಾಂಗಿ ಝರಿ; ದೇವರ ನೆರಳು, ಎರೆಹುಳ, ಆಲಿಕಲ್ಲು ಮುಂತಾದವು. ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು 2021 ಮೇ 05 ರಂದು ಕೊರೋನಾ ಸೋಂಕಿಗೆ ಬಲಿಯಾಗಿ ನಿಧನರಾದರು. ಕೃತಿಗಳು: ಬುಗ್ಗೆ, ಮರಗಳೂ, ಮಳೆ, ಆಯ್ದ ಹನಿಗವಿತೆಗಳು, ವಚನ ಧ್ಯಾನ, ...
READ MORE