About the Author

ನಾಡಿನ ಹೆಸರಾಂತ ಪತ್ರಕರ್ತೆ, ಪ್ರಕಾಶಕಿಯಾಗಿರುವ ವಿಜಯಾ ಅವರು ದಾವಣಗೆರೆಯವರು. ಅವರು 1942 ಮಾರ್ಚಿ 10ರಲ್ಲಿ ಶ್ಯಾಮಭಟ್, ಸರೋಜಮ್ಮ ಅವರ ಮಗಳಾಗಿ ಜನಿಸಿದರು. ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವಿ ಪಡೆದ ಅವರು ಇಳಾ ಮುದ್ರಣವನ್ನು ಪ್ರಾರಂಭಿಸಿದ್ದಾರೆ.

ಪರ್ವ ಒಂದು ಸಮೀಕ್ಷೆ, ಇನಾಂದಾರ್: ವ್ಯಕ್ತಿ, ಕೃತಿ, ಇಂದಿನ ರಂಗಕಲಾವಿದರು (ಕನ್ನಡ ರಂಗಭೂಮಿ ಕಲಾವಿದರ ಮಾಹಿತಿ), ರಂಗ ಚಿಂತನೆ, ಕನ್ನಡ ಸಿನೆಮಾ ಸ್ವರ್ಣಮಹೋತ್ಸವ, ಮಕ್ಕಳ ಸಿನೆಮಾ, ಚಲನಚಿತ್ರರಂಗದ ೧೪ ವ್ಯಕ್ತಿ ಚಿತ್ರಣ, ಕಿರಿಯರ ಕರ್ನಾಟಕ, ಪದಾಂತರಂಗ (ಎನ್.ಕೆ. ಪದ್ಮಾದೇವಿ ಬದುಕು-ಬರಹ ಲೇಖನ ಸಂಗ್ರಹ), ಅಕ್ಕರೆ (ಎನ್. ವ್ಯಾಸರಾಯ ಬಲ್ಲಾಳರ ಅಭಿನಂದನಾ ಗ್ರಂಥ), ಕನ್ನಡ ಚಲನಚಿತ್ರ ಇತಿಹಾಸ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ-ಸಂಸ್ಕತಿ, ಕರ್ನಾಟಕ ಕಲಾದರ್ಶನ, ಬೆಂಗಳೂರು ದರ್ಶನ, History of Kannada Cinema’ ಇತ್ಯಾದಿ ಅವರ ಪ್ರಕಟಿತ ಕೃತಿಗಳು. 

ತಾರಾಶಂಕರ್ ಬಂಡೋಪಾಧ್ಯಾಯ ನಾಟಕಗಳು, ಉಳ್ಳವರ ನೆರಳು, ಬಂದರೋ ಬಂದರು, ಮುಖವಿಲ್ಲದವರು, ಕೇಳಪ್ಪೋ ಕೇಳಿ, ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ, ಏಳು ನಾಟಕಗಳು, ಧನ್ವಂತರಿಯ ಚಿಕಿತ್ಸೆ, ಮಾ ನಿಷಾದ, ಬೀದಿ ನಾಟಕಗಳು’ ಅವರ ಭಾಷಾಂತರ ಕೃತಿಗಳಾಗಿದ್ದು ‘ಸುದ್ದಿ ಕನ್ನಡಿ, ಸುದ್ದಿ ಕನ್ನಡಿ’ ಅವರ ಅಂಕಣ ಬರಹಗಳಾಗಿವೆ.

‘ಸಣ್ಣಕಥೆಯ ಸೊಗಸು, ಮಾತಿನಿಂದ ಲೇಖನಿಗೆ, ಸಂಕುಲ, ನಿಜಧ್ಯಾನ’ ಅವರ ಲೇಖನಗಳ ಸಂಗ್ರಹ, ಅಲ್ಲದೆ ‘ಸತ್ಯಜಿತ್ ರೇ, ಎ.ಎನ್.ಸುಬ್ಬರಾವ್, ನೇಮಿಚಂದ್ರ’ ಅವರ ವ್ಯಕ್ತಿ ಚಿತ್ರಣವನ್ನು ರಚಿಸಿದ್ದಾರೆ. ‘ಶ್ರೀರಂಗ-ರಂಗ ಸಾಹಿತ್ಯ (ಪಿಎಚ್.ಡಿ. ಮಹಾಪ್ರಬಂಧ) ರಚಿಸಿದ್ದಾರೆ.

ಅವರ ಈ ಸಾಹಿತ್ಕಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ಸ್ಮಾರಕ ದತ್ತಿನಿಧಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ (ಪತ್ರಿಕಾರಂಗಕ್ಕೆ ಸಲ್ಲಿಸಿದ ಸೇವೆಗಾಗಿ), ಆರ್‌.ಎನ್.ಆರ್. ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಲೋಕ ಶಿಕ್ಷಣ ಟಸ್ ಪ್ರಶಸ್ತಿ (ಸಮಾಜ ಸೇವೆಗಾಗಿ), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ 'ಅನುಪಮಾ ಪ್ರಶಸ್ತಿ' , ಮಾಸ್ತಿ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಸಂದಿದೆ.

ಪ್ರಜಾಮತ, ಮಲ್ಲಿಗೆ, ತುಷಾರ, ರೂಪತಾರ, ಉದಯವಾಣಿ, ಅರಗಿಣಿ, ಕರ್ಮವೀರ, ನಕ್ಷತ್ರಲೋಕ, ನಮ್ಮ ಮಾನಸ, ಹೊಸತು ಮೊದಲಾದ ಪತ್ರಿಕೆಗಳಿಗೆ ವಿವಿಧ ಸಂಪಾದಕ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಮಾಡಿ, ಚಲನಚಿತ್ರರಂಗದ ಪೂರ್ಣಪ್ರಮಾಣದ ಪತ್ರಕರ್ತೆಯಾಗಿ ವಿಶೇಷ ಸಾಧನೆ ಮಾಡಿದ ಹೆಗ್ಗಳಿಕೆಗೆ ವಿಜಯಮ್ಮ ಪಾತ್ರರಾಗಿದ್ದಾರೆ.

ಅಂಕಣಗಾರ್ತಿಯಾಗಿಯೂ ಹಲವಾರು ಲೇಖನಗಳ ಮೂಲಕ ಚಿರಪರಿಚಿತರಾದ ಇವರು ಚಲನಚಿತ್ರ, ಪತ್ರಿಕಾರಂಗ, ಸಾಹಿತ್ಯ, ನಾಟಕ ಮುಂತಾದ ಕ್ಷೇತ್ರಗಳ ವಿವಿಧ ಸಂಘ, ಸಂಸ್ಥೆ ಸಮಿತಿಗಳಲ್ಲಿ ವಿವಿಧ ಹುದ್ದೆಗಳು. ಪ್ರಥಮ ಮಹಿಳಾ ರಂಗಭೂಮಿ ಸಮಾವೇಶದ ಗೌರವಾಧ್ಯಕ್ಷರಾಗಿ, 'ಸಂಕುಲ' ಪತ್ರಿಕೆಯ ಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿಜಯಾ

Books about Author

Awards